ಸದ್ಯಕ್ಕೆ ಎನ್‌ಆರ್‌ಸಿಯ ಯಾವುದೇ ಯೋಜನೆಯಿಲ್ಲ: ಗೃಹ ಸಚಿವ ಅಮಿತ್ ಶಾ

Update: 2020-05-31 17:58 GMT

ಹೊಸದಿಲ್ಲಿ,ಮೇ 31: ಎನ್‌ಆರ್‌ಸಿ ಇನ್ನೂ ಬಂದಿಲ್ಲ. ಅದನ್ನು ಸದ್ಯಕ್ಕೆ ತರುವ ಯಾವುದೇ ಪ್ರಸ್ತಾವನೆಯಿಲ್ಲ. ಒಂದು ವೇಳೆ ನಾವದನ್ನು ಕೈಗೆತ್ತಿಕೊಳ್ಳುವುದಿದ್ದರೂ ಎಲ್ಲ ಪಾಲುದಾರರೊಡನೆ ಸಮಾಲೋಚನೆಗಳನ್ನು ನಡೆಸಲಾಗುವುದು ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

 ಎನ್‌ಆರ್‌ಸಿ ಕುರಿತು ಸರಕಾರದ ಸದ್ಯದ ನಿಲುವಿನ ಕುರಿತು ಶನಿವಾರ ಹಿಂದಿ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಂಭಾವ್ಯ ಎನ್‌ಆರ್‌ಸಿ ಸಂದರ್ಭದಲ್ಲಿ ಜನರು ತಮ್ಮ ಪೌರತ್ವವನ್ನು ರುಜುವಾತುಗೊಳಿಸಲು ಅಗತ್ಯವಾಗಬಹುದಾದ ದಾಖಲೆಗಳಿಗೆ ಸಂಬಂಧಿಸಿದಂತೆ ಕಳವಳಗಳ ಕುರಿತು ಪ್ರಶ್ನೆಗೆ ಶಾ ಈ ಉತ್ತರವನ್ನು ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ತಾನು ಪುನರುಚ್ಚರಿಸುತ್ತಿದ್ದೇನೆ,ಪೌರತ್ವವನ್ನು ರದ್ದುಗೊಳಿಸಲು ಈ ಕಾಯ್ದೆಯಲ್ಲಿ ಅವಕಾಶಗಳಿಲ್ಲ ಎಂದೂ ಅವರು ಹೇಳಿದರು.

ಮೋದಿ 2.0 ಸರಕಾರದ ಮೊದಲ ವರ್ಷದಲ್ಲಿಯ ಹಲವಾರು ಸಾಧನೆಗಳನ್ನೂ ಅವರು ಉಲ್ಲೇಖಿಸಿದರು. ಸಂವಿಧಾನದ 370ನೇ ವಿಧಿಯ ರದ್ದತಿ,ರಾಮ ಮಂದಿರ ಟ್ರಸ್ಟ್‌ನ ಸ್ಥಾಪನೆ,ತ್ರಿವಳಿ ತಲಾಖ್‌ನ ಅಪರಾಧೀಕರಣ ಮತ್ತು ಸಿಎಎ ಅವರು ಹೇಳಿದ ಸಾಧನೆಗಳಲ್ಲಿ ಒಳಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News