ಕ್ವಾರಂಟೈನ್‍ನಲ್ಲಿದ್ದವರು ವರದಿ ಬರುವ ಮುನ್ನವೇ ಮನೆಗೆ: ಸತೀಶ್ ಜಾರಕಿಹೊಳಿ ಆರೋಪ

Update: 2020-05-31 18:35 GMT

ಬೆಳಗಾವಿ, ಮೇ 31: ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‍ನಲ್ಲಿದ್ದ ಕೆಲವರ ಗಂಟಲು ದ್ರವದ ಮಾದರಿ ಬರುವ ಮೊದಲೇ ಮನೆಗೆ ಕಳುಹಿಸಲಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 1,818 ಮಂದಿಯ ವರದಿ ಬರಬೇಕಿದೆ. ಆಗಿದ್ದರೂ ಕ್ವಾರಂಟೈನ್‍ನಲ್ಲಿದ್ದ ಸುಮಾರು 600 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಸರಕಾರ ಈ ಬಗ್ಗೆ ಗಮನ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

'ನನ್ನ ಗೆಸ್ಟ್ ಹೌಸ್‍ನಲ್ಲಿ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರೆಲ್ಲರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಲಕ್ಷಣ ಹೊಂದಿರುವವರನ್ನು ಹೊರತು ಪಡಿಸಿ ಉಳಿದವರನ್ನು ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿದೆ. ಹೀಗೆ ಮನೆಗೆ ಹೋದ ಬೆಳಗಾವಿ ತಾಲೂಕಿನ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ವರದಿ ಬರುವ ಮುನ್ನ ಯಾರನ್ನು ಮನೆಗೆ ಕಳುಹಿಸಬಾರದೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News