ಅಸ್ಸಾಂನ ವಿವಿಧೆಡೆ ಭಾರೀ ಭೂಕುಸಿತ: 20 ಮಂದಿ ಮೃತ್ಯು

Update: 2020-06-02 08:41 GMT
ಸಾಂದರ್ಭಿಕ ಚಿತ್ರ

ಗುವಾಹಟಿ: ಇಂದು ಅಸ್ಸಾಂನಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 20 ಜನರು ಮೃತಪಟ್ಟ ಘಟನೆ ವರದಿಯಾಗಿದೆ. ದಕ್ಷಿಣ ಅಸ್ಸಾಂನ ಬರಾಕ್ ಪ್ರಾಂತ್ಯದ 3 ಜಿಲ್ಲೆಗಳಲ್ಲಿ ಈ ಭೂಕುಸಿತಗಳು ಸಂಭವಿಸಿದೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬಂದಿವೆ.

ಮೃತರಲ್ಲಿ 7 ಮಂದಿ ಕಚಾರ್ ಜಿಲ್ಲೆ, 7 ಮಂದಿ ಹೈಲಕಂಡಿ ಜಿಲ್ಲೆ ಮತ್ತು ಇತರ 6 ಮಂದಿ ಕರೀಮ್ ಗಂಜ್ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News