ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯ 13 ಮಂದಿಗೆ ಕೋವಿಡ್-19 ಸೋಂಕು ದೃಢ

Update: 2020-06-02 17:24 GMT

ಹೊಸದಿಲ್ಲಿ, ಜೂ.2: ದಿಲ್ಲಿಯ ಲೆ.ಗ.ಅನಿಲ್ ಬೈಜಾಲ್ ಅವರ ಕಚೇರಿಯ 13 ಸಿಬ್ಬಂದಿಗಳು ಕೋವಿಡ್-19 ಸೋಂಕಿಗೊಳ ಗಾಗಿದ್ದಾರೆ.

ವರದಿಗಳಂತೆ ಲೆ.ಗ.ಕಚೇರಿಯ ವಿಸ್ತರಿತ ಶಾಖೆಯಲ್ಲಿ ಮೊದಲ ಕೊರೋನ ವೈರಸ್ ಪ್ರಕರಣ ವರದಿಯಾಗಿದ್ದು,  ಈಗ ಮುಖ್ಯ ಕಚೇರಿಯ 13 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸೋಮವಾರ ದಿಲ್ಲಿಯ ನೀತಿ ಆಯೋಗದ ಕಚೇರಿಯ ಓರ್ವ ಅಧಿಕಾರಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕು ನಿವಾರಕ ಸಿಂಪಡಣೆಗಾಗಿ ಕಟ್ಟಡದ ಮೂರನೇ ಅಂತಸ್ತನ್ನು ಸೀಲ್ ಮಾಡಲಾಗಿದೆ.

ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇಬ್ಬರು ಅಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ದಿಲ್ಲಿಯಲ್ಲಿ ಈಗಾಗಲೇ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 20,000 ದಾಟಿದೆ.

ಆ್ಯಪ್ ಬಿಡುಗಡೆ

ಮಂಗಳವಾರ ಆನ್‌ಲೈನ್ ಭಾಷಣ ಮಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಆಸ್ಪತ್ರೆಗಳಲ್ಲಿ ಖಾಲಿ ಹಾಸಿಗೆಗಳನ್ನು ಗುರುತಿಸಲು ಕೋವಿಡ್-19 ರೋಗಿಗಳಿಗೆ ಅನುಕೂಲವಾಗುವಂತೆ ಸರಕಾರವು ಹೊಸ ಆ್ಯಪ್‌ನ್ನು ರೂಪಿಸಿದೆ. ಹಾಸಿಗೆ ಲಭ್ಯವಿದೆ ಎಂದು ಆ್ಯಪ್ ತೋರಿಸಿದ ಬಳಿಕವೂ ಆಸ್ಪತ್ರೆಯು ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ 1031 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ತಕ್ಷಣ ಹಾಸಿಗೆಯನ್ನು ಒದಗಿಸಲು ವಿಶೇಷ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News