‘ಪಿಎಂ ಕೇರ್ಸ್’ ನಿಧಿ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ ಅಪೀಲಿಗೆ ಕೇಂದ್ರದ ವಿರೋಧ

Update: 2020-06-02 09:52 GMT

ಹೊಸದಿಲ್ಲಿ: ಕೋವಿಡ್-19 ಸಮಸ್ಯೆ ನಿಭಾಯಿಸಲು ಸರಕಾರ ಆರಂಭಿಸಿರುವ ಪಿಎಂ-ಕೇರ್ಸ್ ಫಂಡ್‍ಗೆ ದೊರೆತ ದೇಣಿಗೆಗಳ ವಿವರಗಳನ್ನು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅಪೀಲನ್ನು ವಿರೋಧಿಸಿರುವ ಕೇಂದ್ರ ಸರಕಾರ ಅದನ್ನು ರದ್ದುಪಡಿಸಬೇಕೆಂದು ಕೋರಿದೆ.

ಅರವಿಂದ್ ವಾಘ್ಮರೆ ಎಂಬ ವಕೀಲರು ಸಲ್ಲಿಸಿರುವ ಅಪೀಲನ್ನು ತಿರಸ್ಕರಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಬಾಂಬೆ ಹೈಕೋರ್ಟಿನ ನಾಗ್ಪುರ್ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆ ವೇಳೆ ಹೇಳಿದ್ದಾರೆ. ಇಂತಹುದೇ ಒಂದು ಅಪೀಲನ್ನು ಸುಪ್ರೀಂ ಕೋರ್ಟ್ ಎಪ್ರಿಲ್‍ನಲ್ಲಿ ತಿರಸ್ಕರಿಸಿತ್ತು ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿವಿಧ ರೀತಿಯ ಪರಿಹಾರ ಕೋರಿ ಈ ಅಪೀಲು ಸಲ್ಲಿಸಲಾಗಿರುವುದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ಸರಕಾರ ಎರಡು ವಾರಗಳೊಳಗಾಗಿ ಅಫಿಡವಿಟ್ ಸಲ್ಲಿಸಬೇಕೆಂದು ನ್ಯಾಯಾಲಯ ಹೇಳಿದೆ.

ಪಿಎಂ-ಕೇರ್ಸ್ ಫಂಡ್‍ಗೆ ದೊರೆತ ದೇಣಿಗೆ ಹಾಗೂ ಆ ಮೊತ್ತದಿಂದ ಮಾಡಲಾಗುತ್ತಿರುವ ಖರ್ಚಿನ ವಿವರಗಳನ್ನು ನಿಯಮಿತವಾಗಿ ಸರಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕೆಂದೂ ಅಪೀಲುದಾರರು ಕೋರಿದ್ದರು. ನಿಧಿ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ವಿಪಕ್ಷಗಳ ಕನಿಷ್ಠ ಇಬ್ಬರು ಸದಸ್ಯರನ್ನು ಪಿಎಂ ಕೇರ್ಸ್ ಟ್ರಸ್ಟ್‍ಗೆ ನೇಮಕಗೊಳಿಸುವಂತೆಯೂ ಅವರು ತಮ್ಮ ಅಪೀಲಿನಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News