ರಾಮಮಂದಿರ ಬದಲು ಬುದ್ಧ ವಿಹಾರ ಕಟ್ಟಿ: ರಾಜ್ಯದ ವಿವಿಧ ಕಡೆ ದಲಿತ-ಬೌದ್ಧ ಅನುಯಾಯಿಗಳ ಪ್ರತಿಭಟನೆ

Update: 2020-06-04 18:01 GMT

ಬೆಂಗಳೂರು, ಜೂ.4: ಅಯೋಧ್ಯೆಯಲ್ಲಿ ಗೌತಮ ಬುದ್ಧರ ಅವಶೇಷ ಸಿಕ್ಕಿರುವ ಹಿನ್ನೆಲೆ ರಾಮಮಂದಿರ ಬದಲು ಬುದ್ಧ ವಿಹಾರ ಕಟ್ಟಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಕಡೆ ದಲಿತ-ಬೌದ್ಧ ಅನುಯಾಯಿಗಳು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

ಗುರುವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಅಂಬೇಡ್ಕರ್ ಹಿತಾಭಿವೃದ್ಧಿ ಸಂಘದ ಸದಸ್ಯರು, ಅಯೋಧ್ಯೆಯ ರಾಮಮಂದಿರ ಸ್ಥಳವು ಬುದ್ಧನಿಗೆ ಸೇರಿದ್ದು, ಆ ಸ್ಥಳದಲ್ಲಿ ಬುದ್ಧ ವಿಹಾರ ನಿರ್ಮಿಸುವಂತೆ ಒತ್ತಾಯಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಸಂದರ್ಭದಲ್ಲಿ ಅಲ್ಲಿ ಬುದ್ಧನ ಮೂರ್ತಿ ಪತ್ತೆಯಾಗಿದೆ. ಈ ಸಂಬಂಧ ಕೇಂದ್ರ ಸರಕಾರದ ಅಧೀನದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು ಸೂಕ್ತ ದಾಖಲೆ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟದೇ ಆ ಸ್ಥಳವನ್ನು ಬೌದ್ಧ ವಿಹಾರ ಕಟ್ಟುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕಲಬುರಗಿ: ಅಯೋಧ್ಯೆಯಲ್ಲಿ ಬುದ್ಧನ ಅವಶೇಷಗಳು ಪತ್ತೆಯಾದ ಹಿನ್ನೆಲೆ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಿಸದಿರುವಂತೆ ಆಗ್ರಹಿಸಿ ಅಖಿಲ ಭಾರತ ಬುದ್ಧ ಗಯಾ ಮಹಾಬೋಧಿ ಟೆಂಪಲ್ ಆ್ಯಕ್ಷನ್ ಕಮಿಟಿ ಒತ್ತಾಯಿಸಿದೆ.

ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬಾರದು. ಆ ಸ್ಥಾನವನ್ನು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಪ್ಪಿಸಬೇಕು. ಹಾಗೂ ಐತಿಹಾಸಿಕ ಸ್ಮಾರಕವೆಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಕಮಿಟಿ ಸದಸ್ಯರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News