'ದಲಿತರು ಅಮೆರಿಕ ಮಾದರಿ ಪ್ರತಿಭಟಿಸಿ' ಎಂಬ ಹೇಳಿಕೆ: ಲೇಖಕ ಆಕಾರ್ ಪಟೇಲ್ ವಿರುದ್ಧ ಎಫ್ಐಆರ್

Update: 2020-06-05 14:03 GMT

ಬೆಂಗಳೂರು, ಜೂ.5: ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ನಡೆಸುವಂತೆ ಟ್ವಿಟರ್ ಮೂಲಕ ಹೇಳಿಕೆ ನೀಡಿದ್ದ ಲೇಖಕ ಆಕಾರ್ ಪಟೇಲ್ ವಿರುದ್ಧ ಇಲ್ಲಿನ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ಮಾಡುವಂತೆ ಟ್ವಿಟರ್ ನಲ್ಲಿ ಲೇಖಕ ಆಕಾರ್ ಪಟೇಲ್ ಕರೆ ನೀಡಿದ್ದರು. ಈ ಹಿನ್ನೆಲೆ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದ ಆರೋಪದ ಮೇಲೆ ಜೆಸಿ ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಹೇಳಿಕೆ?: ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಡಿಯೊವನ್ನು ಅಲ್ಲಿನ ಮಾಧ್ಯಮವೊಂದು ಟ್ವೀಟ್ ಮಾಡಿದೆ. ಇದನ್ನು ರಿಟ್ವೀಟ್ ಮಾಡಿರುವ ಲೇಖಕ ಆಕಾರ್ ಪಟೇಲ್, “ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಮತ್ತು ಮಹಿಳೆಯರಿಂದ ಭಾರತದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಬೇಕಿದೆ. ಇದರಿಂದಾಗಿ ಜಗತ್ತು ನಮ್ಮನ್ನು ಗಮನಿಸುತ್ತದೆ. ಪ್ರತಿಭಟನೆ ಒಂದು ಕರಕುಶಲ’’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News