75 ವರ್ಷದ ವ್ಯಕ್ತಿಯನ್ನು ನೆಲಕ್ಕೆ ಕೆಡವಿದ ನ್ಯೂಯಾರ್ಕ್ ಪೊಲೀಸರ ಅಮಾನತು

Update: 2020-06-05 16:05 GMT

ನ್ಯೂಯಾರ್ಕ್, ಜೂ. 5: ಮಿನಪೊಲಿಸ್ ನಗರದಲ್ಲಿ ಜಾರ್ಜ್ ಫ್ಲಾಯ್ಡಾ ಎಂಬವರನ್ನು ಪೊಲೀಸ್ ಅಧಿಕಾರಿಯೊಬ್ಬ ಆತನ ಕುತ್ತಿಗೆಯ ಮೇಲೆ ಮೊಣಕಾಲೂರಿ ಕುಳಿತು ಕೊಂದು ಹಾಕಿದ ಘಟನೆಯನ್ನು ಪ್ರತಿಭಟಿಸಿ ಅಮೆರಿಕದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, 75ರ ಹರಯದ ವ್ಯಕ್ತಿಯೋರ್ವನನ್ನು ಪೊಲೀಸರು ನೆಲಕ್ಕೆ ದೂಡಿ ಹಾಕಿರುವ ಘಟನೆಯೊಂದು ನ್ಯೂಯಾರ್ಕ್ ರಾಜ್ಯದ ಬಫೆಲೊ ನಗರದಿಂದ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಗುರುವಾರ ವೇತನರಹಿತ ಅಮಾನತಿನಲ್ಲಿಡಲಾಗಿದೆ.

ಈ ಘಟನೆಯನ್ನು ಸ್ಥಳೀಯ ಆಕಾಶವಾಣಿ ನಿಲಯವೊಂದರ ವರದಿಗಾರರೊಬ್ಬರು ವೀಡಿಯೊ ಚಿತ್ರೀಕರಣ ಮಾಡಿದ್ದಾರೆ.

ಬಿಳಿ ಕೂದಲಿನ ವ್ಯಕ್ತಿಯೊಬ್ಬರು ಪೊಲೀಸರತ್ತ ಹೋಗುವಾಗ ಓರ್ವ ಪೊಲೀಸ್ ಸಿಬ್ಬಂದಿ ಅವರನ್ನು ಬೆತ್ತದಿಂದ ದೂಡುತ್ತಾರೆ ಹಾಗೂ ಇನ್ನೊಬ್ಬ ಪೊಲೀಸ್ ಕೈಯಿಂದ ದೂಡುತ್ತಾರೆ. ಕೆಳಗೆ ಬಿದ್ದ ವ್ಯಕ್ತಿಯ ತಲೆಯಿಂದ ರಕ್ತ ಜಿನುಗುವುದು ವೀಡಿಯೊದಲ್ಲಿ ಕಾಣುತ್ತದೆ.

ಬಿಳಿಯನಾಗಿರುವ ಆ ವ್ಯಕ್ತಿಯ ವಿವರಗಳು ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News