ಹಂಪಿಯಲ್ಲಿ ಭೂಕಂಪನ ಸಂಭವಿಸಿಲ್ಲ: ಸ್ಪಷ್ಟನೆ

Update: 2020-06-05 16:53 GMT

ಬೆಂಗಳೂರು, ಜೂ.5: ವಿಶ್ವ ವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿ ಲಘು ಭೂಕಂಪನ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಸ್ಪಷ್ಟಪಡಿಸಿದೆ.

ಹಂಪಿಯ ಪೂರ್ವ ಭಾಗದಿಂದ 181 ಕಿ.ಮೀ ದೂರದಲ್ಲಿನ ಒಂದು ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 4.0 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಅದರ ಪ್ರಭಾವ ಹಂಪಿಯಲ್ಲಿ ದಾಖಲಾಗಿದೆಯಷ್ಟೆ. ಇದನ್ನು ಸ್ವಯಂ ಪ್ರಚೋದಿತ ಘಟನೆಗಳು (auto triggered event) ಎಂದು ಕರೆಯುತ್ತಾರೆ ಎಂದು ಕೆಎಸ್‍ಎನ್‍ಡಿಎಂಸಿ ಅಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಕೆಎಸ್‍ಎನ್‍ಡಿಎಂಸಿ ಮಾನಿಟರಿಂಗ್ ಸ್ಟೇಷನ್ ವ್ಯಾಪ್ತಿಯಲ್ಲಿ, ಅಂದರೆ ರಾಜ್ಯದಲ್ಲಿ ಯಾವುದೇ ರೀತಿಯ ಭೂಕಂಪನ ನಡೆದಿಲ್ಲ. ಜನರು ಭಯಪಡುವ ಅವಶ್ಯಕತೆಯಿಲ್ಲ ಎಂದು ಜಗದೀಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News