ಆಹಾರ ಕಿಟ್‍ ಗಾಗಿ 5 ಕಿ.ಮೀ ನಡೆದು ಬಂದ ವೃದ್ಧೆ ಬರಿಗೈಲಿ ವಾಪಸ್

Update: 2020-06-05 17:39 GMT

ಬೆಳಗಾವಿ, ಜೂ.5: ಆಹಾರ ಕಿಟ್‍ಗಾಗಿ 80 ವರ್ಷದ ವೃದ್ಧೆಯೊಬ್ಬರು 5 ಕಿ.ಮೀ ದೂರದಿಂದ ನಡೆದು ಬಂದು, ಬರಿಗೈಲಿ ವಾಪಾಸ್ಸಾದ ಘಟನೆ ಬೆಳಗಾವಿಯ ಖಾಸಬಾಗ ನಗರದಲ್ಲಿ ನಡೆದಿದೆ.

ಇವರಿಗೆ ಒಂದು ವರ್ಷದಿಂದ ವೃದ್ಧಾಪ್ಯ ವೇತನ ಬಾರದಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ, ಕೊರೋನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಮುಂದೆ ಆಹಾರ ಕಿಟ್ ಕೊಡುತ್ತಿದ್ದಾರೆ ಎಂಬ ಸುದ್ದಿ ತಿಳಿದು 5 ಕಿ.ಮೀ ದೂರದಿಂದ ನಡೆದು ಬಂದಿದ್ದರು.

ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆಹಾರದ ಕಿಟ್ ಸಿಗದೇ ಬರಿಗೈಲಿ ವಾಪಾಸ್ಸಾಗಿದ್ದರು. ನನಗೆ ಆಹಾರ ಕಿಟ್ ನೀಡಿ ಮತ್ತು ವೃದ್ಧಾಪ್ಯ ವೇತನ ಸಿಗುವಂತೆ ಮಾಡಿ ಎಂದು ಕಣ್ಣೀರು ಹಾಕಿದರು ಎಂದು ತಿಳಿದುಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News