ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ: ನಮಾಝ್ ಮಾಡುತ್ತಿದ್ದ ಪ್ರತಿಭಟನಕಾರರನ್ನು ಇತರರು ರಕ್ಷಿಸಿದ್ದು ಹೀಗೆ…

Update: 2020-06-05 18:43 GMT

ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದಾದ್ಯಂತ ಭಾರೀ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನೆ ವೇಳೆ ನಮಾಝ್ ಮಾಡುತ್ತಿದ್ದ ಮುಸ್ಲಿಮರನ್ನು ಮುಸ್ಲಿಮೇತರರು ಪೊಲೀಸರಿಂದ ರಕ್ಷಿಸಲು ಮಾನವಸರಪಳಿ ರಚಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ.

ಜನರ ಗುಂಪೊಂದು ನಮಾಝ್ ಮಾಡುತ್ತಿರುವುದು ಮತ್ತು ಅವರನ್ನು ಸುತ್ತುವರಿದು ಜನರು ನಿಂತು ಪೊಲೀಸರಿಂದ ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News