ಚಿಕ್ಕಮಗಳೂರು: ಸದ್ಯಕ್ಕೆ ಶೃಂಗೇರಿ ಶಾರದಾಂಬೆ ದೇಗುಲ ತೆರೆಯದಿರಲು ಆಡಳಿತ ಮಂಡಳಿ ನಿರ್ಧಾರ

Update: 2020-06-06 07:47 GMT

ಚಿಕ್ಕಮಗಳೂರು, ಜೂ.6: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಧಾರ್ಮಿಕ ಕೇಂದ್ರಗಳನ್ನು ತಾತ್ಕಾಲಿಕ ನಿರ್ಬಂಧಿಸಿ ಆದೇಶಿಸಿದ್ದ ಕೇಂದ್ರ ಮತ್ತು ರಾಜ್ಯ ಸರಕಾರ ಜೂ.8ರಿಂದ ಮತ್ತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ಶೃಂಗೇರಿ ಶಾರದಾಂಬೆ ದೇಗುಲ ಸೇರಿ ಜಿಲ್ಲೆಯ ಎರಡು ಪ್ರಮುಖ ದೇವಾಲಯಗಳು ಸದ್ಯಕ್ಕೆ ತೆರೆಯದಿರಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

ಜೂ.8ರಂದು ಶೃಂಗೇರಿ ಶಾರದಾಂಬೆ ಮತ್ತು ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ತೆರೆಯುವುದಿಲ್ಲ. ಈ ಎರಡು ದೇವಾಲಯಗಳಿಗೆ ಕೇರಳ, ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ, ಸದ್ಯಕ್ಕೆ ದೇವಾಲಯ ತೆರೆಯದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News