2 ತಿಂಗಳ ಬಳಿಕ ರಾಜ್ಯದ ಈ ಗ್ರಾಮ ಸೀಲ್‍ಡೌನ್ ಮುಕ್ತ: ಪಟಾಕಿ ಸಿಡಿಸಿ ಸಂಭ್ರಮಿಸಿದ ಗ್ರಾಮಸ್ಥರು

Update: 2020-06-06 15:50 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಜೂ.6: ಎರಡು ತಿಂಗಳು ಸೀಲ್ ಡೌನ್ ಆಗಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ ಇದೀಗ ಕೊರೋನ ಮುಕ್ತವಾಗಿದ್ದು, ಗ್ರಾಮಸ್ಥರು ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ.

49 ಕೊರೋನ ಪ್ರಕರಣಗಳು ಪತ್ತೆಯಾಗಿದ್ದ ಗ್ರಾಮದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಬಾಕಿ ಉಳಿದವರೆಲ್ಲರೂ ಕೊರೋನದಿಂದ ಗುಣಮುಖರಾಗಿದ್ದಾರೆ.

ಎ.3ರಿಂದ ಸೀಲ್‍ಡೌನ್ ಆಗಿದ್ದ ಹಿರೇಬಾಗೇವಾಡಿ ಗ್ರಾಮ ಈಗ ಗ್ರಾಮಸ್ಥರಿಗೆ ತೆರೆದುಕೊಂಡಿದೆ. ಈ ಗ್ರಾಮದ 49 ಜನರಿಗೆ ಸೋಂಕು ಹರಡಿತ್ತು. ಎ.3ರಂದು ಮೊದಲ ಬಾರಿ ಹಿರೇಬಾಗೇವಾಡಿಯಲ್ಲಿ 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಒಟ್ಟು 49 ಮಂದಿಗೆ ಕೊರೋನ ಪಾಸಿಟಿವ್ ಬಂದಿತ್ತು. ಕೊನೆಯದಾಗಿ ಗ್ರಾಮದ 43 ವರ್ಷದ ಮಹಿಳೆಯೂ ಗುಣಮುಖರಾಗುವುದರೊಂದಿಗೆ ಗ್ರಾಮ ಕೊರೋನದಿಂದ ಮುಕ್ತವಾಗಿದೆ.

ಕಳೆದ 28 ದಿನಗಳಿಂದ ಹಿರೇಬಾಗೇವಾಡಿಯಲ್ಲಿ ಯಾವುದೇ ಕೊರೋನ ಪತ್ತೆಯಾಗಿಲ್ಲ ಎಂಬುದು ಅತ್ಯಂತ ಸಮಾಧಾನಕರ ಸಂಗತಿ. ಹಿರೇಬಾಗೇವಾಡಿ ಗ್ರಾಮದಲ್ಲಿ ಜನಜೀವನ ಈಗ ಯಥಾಸ್ಥಿತಿಗೆ ಮರಳುತ್ತಿದೆ. ಮಾಲಕರು ತಮ್ಮ ಅಂಗಡಿ ಮುಂಗಟ್ಟು ತೆರೆದು ಶುಚಿಗೊಳಿಸುತ್ತಿದ್ದಾರೆ. ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ಪಂಚಾಯತ್ ಸಿಬ್ಬಂದಿ ಗ್ರಾಮದ ರಸ್ತೆ ಹಾಗೂ ಬ್ಯಾರಿಕೇಡ್‍ಗಳಿಗೆ ಸ್ಯಾನಿಟೈಸ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News