ಈ ವರ್ಷ ಹಜ್ ಸಾಧ್ಯತೆ ಕಡಿಮೆ, ಶೇ.100ರಷ್ಟು ಹಣ ವಾಪಸ್: ಹಜ್ ಸಮಿತಿ

Update: 2020-06-06 16:13 GMT

ಹೊಸದಿಲ್ಲಿ,ಜೂ.6: ವಿಶ್ವಾದ್ಯಂತ ಕೊರೋನ ವೈರಸ್ ಲಾಕ್‌ಡೌನ್ ನಡುವೆ ತಮ್ಮ ಹಜ್ ಯಾತ್ರೆಯನ್ನು ರದ್ದುಗೊಳಿಸಲು ಬಯಸುವವರಿಗೆ ಶೇ.100ರಷ್ಟು ಹಣವನ್ನು ಮರಳಿಸಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧೀನದ ಭಾರತೀಯ ಹಝ್ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಸೂದ್ ಅಹ್ಮದ್ ಖಾನ್ ಅವರು ಶನಿವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಪೂರ್ವ ಸಿದ್ಧತೆಗಳನ್ನು ಆರಂಭಿಸಲು ಕೆಲವೇ ವಾರಗಳು ಬಾಕಿಯಿವೆ,ಆದರೆ ಹಜ್ ಯಾತ್ರೆಯ ಬಗ್ಗೆ ಸೌದಿ ಅರೇಬಿಯಾದ ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭಿಸಿಲ್ಲ ಎಂದ ಅವರು,ಈ ವರ್ಷದ ಹಜ್ ಯಾತ್ರೆಯು ನಡೆಯುವ ಸಾಧ್ಯತೆ ತೀರ ಕಡಿಮೆಯಿದೆ. ರದ್ದತಿಗೆ ಅರ್ಜಿ ಸಲ್ಲಿಸದವರಿಗೂ ಸಂಪೂರ್ಣ ಹಣ ಮರಳಿ ದೊರೆಯಲಿದೆ ಎಂದರು.

ಹಜ್ ಸಮಿತಿಯ ಅಂಕಿಅಂಶಗಳಂತೆ ಭಾರತದಿಂದ ಸುಮಾರು ಎರಡು ಲಕ್ಷ ಜನರು ಹಜ್ ಗೆ ತೆರಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News