ಧಾರವಾಡ ಜಿ.ಪಂ. ಸದಸ್ಯನ ಹತ್ಯೆ ಹಿಂದೆ ಕನ್ನಡ ಪರ ಸಂಘಟನೆ ಮುಖಂಡರ ಕೈವಾಡ: ಸಿಬಿಐ ಆರೋಪ

Update: 2020-06-06 16:49 GMT
ಯೋಗೇಶ್‍ ಗೌಡ

ಧಾರವಾಡ, ಜೂ.6: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್‍ ಗೌಡ ಗೌಡರ್ ಕೊಲೆಯ ಹಿಂದೆ ರಾಜಕೀಯ ಉದ್ದೇಶವಿತ್ತು ಎಂದು ಆರೋಪಿಸಿ ಸಿಬಿಐ, ಧಾರವಾಡ ಜಿಲ್ಲಾ ಸೆಷನ್ಸ್ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಕೊಲೆಯ ಹಿಂದೆ ಕನ್ನಡಪರ ಸಂಘಟನೆಯೊಂದರ ಮುಖಂಡರ ಕೈವಾಡವೂ ಇದೆ ಎಂಬ ಮಾಹಿತಿಯನ್ನು ಸಿಬಿಐ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಹೊರಗೆಡವಿದೆ.

ಕನ್ನಡಪರ ಸಂಘಟನೆಯ ದಿನೇಶ್(ಆರೋಪಿ 8) ಮತ್ತು ಅಶ್ವಥ್(ಆರೋಪಿ 9) ಎಂಬುವರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಎಂದು ದೋಷಾರೋಪಣೆ ಪಟ್ಟಿ ವಿವರಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ಯೋಗೀಶ್‍ ಗೌಡ ಗೌಡರ್ ಹತ್ಯೆ ನಡೆಸುವ ಭಾಗವಾಗಿಯೇ ಒಂದನೆ ಆರೋಪಿ ಬಸವರಾಜ ಮುತ್ತಗಿ ಎಂಬಾತ ದಿನೇಶ್ ಮತ್ತು ಅಶ್ವಥ್ ಅವರೊಂದಿಗೆ ಸಮಾಲೋಚಿಸಲು 2016ರ ಎಪ್ರಿಲ್ ಮತ್ತು ಮೇ ಮಧ್ಯದಲ್ಲಿ ಹಲವು ಬಾರಿ ಬೆಂಗಳೂರಿಗೆ ಬಂದಿದ್ದನಲ್ಲದೆ ಹತ್ಯೆಗೈಯಲು ಇವರಿಬ್ಬರ ಸಹಕಾರವನ್ನು ಪಡೆದಿದ್ದ ಎಂಬ ವಿವರಗಳು ದೋಷಾರೋಪಣೆ ಪಟ್ಟಿಯಲ್ಲಿವೆ. ಇದಲ್ಲದೆ ಯೋಗೀಶ್‍ ಗೌಡನನ್ನು ಹತ್ಯೆಗೈಯಲು ನಡೆಸಿದ್ದ ಕಾರ್ಯಾಚರಣೆಯನ್ನು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News