ಒತ್ತಡ ನಿಭಾಯಿಸುವುದಕ್ಕೆ ಭಾರತ ಅಸಮರ್ಥ: ಗಂಭೀರ್

Update: 2020-06-14 04:32 GMT

ಹೊಸದಿಲ್ಲಿ, ಜೂ.13: ‘ನಿರ್ಣಾಯಕ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಭಾರತೀಯ ಆಟಗಾರರು ಅಸಮರ್ಥರಾಗಿದ್ದಾರೆ. ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸದೇ ವಿಶ್ವ ಚಾಂಪಿಯನ್ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತ 1983 ಹಾಗೂ 2011ರಲ್ಲಿ ಎರಡು ಬಾರಿ ಏಕದಿನ ವಿಶ್ವಕಪ್‌ನ್ನು ಗೆದ್ದುಕೊಂಡಿತ್ತು. ಆದರೆ ನಾಲ್ಕು ಬಾರಿ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಎಡವಿತ್ತು. ಇದರಲ್ಲಿ 2015 ಹಾಗೂ 2019ರ ಆವೃತ್ತಿಯ ವಿಶ್ವಕಪ್ ಕೂಡ ಸೇರಿದೆ. 2007ರಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. 2014ರಲ್ಲಿ ಫೈನಲ್ ತಲುಪಿತ್ತು.

‘‘ತಂಡದಲ್ಲಿ ಉತ್ತಮ ಆಟಗಾರರಿದ್ದರೂ ಇತರ ತಂಡಗಳಂತೆ ನಮಗೆ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಲೀಗ್ ಹಂತದಲ್ಲಿ ನಿಜಕ್ಕೂ ಉತ್ತಮವಾಗಿ ಆಡುವ ತಂಡ ಸೆಮಿಫೈನಲ್ ಅಥವಾ ನಾಕೌಟ್ ಹಂತದಲ್ಲಿ ಎಡವುತ್ತದೆ. ಬಹುಶಃ ಇದು ತಂಡದ ಮಾನಸಿಕ ಕಠಿಣತೆಯೂ ಆಗಿರಬಹುದು’’ ಎಂದು ಸ್ಪೋರ್ಟ್ಸ್ ಸ್ಟಾರ್‌ನ ಕಾರ್ಯಕ್ರಮ ‘ಕ್ರಿಕೆಟ್ ಕನೆಕ್ಟೆಡ್’ನಲ್ಲಿ ಗಂಭೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News