4ಜಿ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಬಿಎಸ್ಸೆನ್ನೆಲ್ ಗೆ ಸರಕಾರದ ಸೂಚನೆ: ವರದಿ

Update: 2020-06-17 17:43 GMT

ಹೊಸದಿಲ್ಲಿ: ಬಿಎಸ್ಸೆನ್ನೆಲ್ ನ 4ಜಿ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಟೆಲಿಕಾಂ ಇಲಾಖೆಯು ಬಿಎಸ್ಸೆನ್ನೆಲ್ ಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಭದ್ರತಾ ಕಾರಣಗಳಿಗಾಗಿ ಚೀನಾದ ಉಪಕರಣಗಳನ್ನು ಬಳಸದಂತೆ ಬಿಎಸ್ಸೆನ್ನೆಲ್ ಗೆ ಸೂಚನೆ ನೀಡಲು ಸಚಿವಾಲಯವು ನಿರ್ಧರಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಚೀನಾದ ಸಂಸ್ಥೆಗಳಿಂದ ನಿರ್ಮಿತ ಸಾಮಗ್ರಿಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವಂತೆ ಗಮನಹರಿಸಲು ಖಾಸಗಿ ಆಪರೇಟರ್ ಗಳಿಗೂ ಸರಕಾರ ಸೂಚನೆ ನೀಡಲಿದೆ ಎಂದು ವರದಿಯಾಗಿದೆ.

ಲಡಾಕ್ ನಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾದ ನಂತರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News