​ಕೂಲರ್‌ಗಾಗಿ ವೆಂಟಿಲೇಟರ್ ಪ್ಲಗ್ ತಪ್ಪಿಸಿ ರೋಗಿಯ ಸಾವಿಗೆ ಕಾರಣರಾದ ಕುಟುಂಬಸ್ಥರು !

Update: 2020-06-20 04:21 GMT

ಕೋಟಾ : ಏರ್ ಕೂಲರ್ ಚಾಲನೆ ಮಾಡಲು ಪ್ಲಗ್ ಇಲ್ಲ ಎಂಬ ಕಾರಣಕ್ಕೆ ರೋಗಿಗೆ ಅಳವಡಿಸಿದ್ದ ವೆಂಟಿಲೇಟರ್‌ನ ಪ್ಲಗ್ ಕಿತ್ತು, ಕುಟುಂಬದವರೇ ರೋಗಿಯ ಸಾವಿಗೆ ಕಾರಣವಾದ ಘಟನೆ ವರದಿಯಾಗಿದೆ. 

ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಶಂಕಿಸಲಾದ 40 ವರ್ಷದ ವ್ಯಕ್ತಿಯನ್ನು ಮಹಾರಾವ್ ಭೀಮ್ ಸಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಜೂನ್ 13ರಂದು ದಾಖಲಿಸಲಾಗಿತ್ತು. ಆದರೆ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಘಟನೆ ಬಗ್ಗೆ ತನಿಖೆಗೆ ಮೂವರು ಸದಸ್ಯರ ಸಮಿತಿ ನೇಮಕ ಮಾಡಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೂನ್ 15ರಂದು ಈ ವ್ಯಕ್ತಿಯನ್ನು ಐಸೊಲೇಶನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ಐಸೊಲೇಶನ್ ವಾರ್ಡ್‌ನಲ್ಲಿ ತೀರಾ ಸೆಖೆ ಇದ್ದ ಕಾರಣದಿಂದ ಕುಟುಂಬ ಸದಸ್ಯರು ಅದೇ ದಿನ ಏರ್‌ಕೂಲರ್ ತಂದಿದ್ದರು. ಕೂಲರ್‌ಗೆ ಸಾಕೆಟ್ ಇಲ್ಲದ ಕಾರಣ ವೆಂಟಿಲೇಟರ್‌ನ ಪ್ಲಗ್ ಕಿತ್ತು ಕೂಲರ್ ಅಳವಡಿಸಿದರು. ಅರ್ಧಗಂಟೆ ಬಳಿಕ ವೆಂಟಿಲೇಟರ್‌ಗೆ ವಿದ್ಯುತ್ ಇಲ್ಲದೇ ರೋಗಿ ಮೃತಪಟ್ಟರು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News