ಭಾರತ, ಚೀನಾ ಮಾತುಕತೆ ಮೂಲಕ ವಿವಾದ ಬಗೆಹರಿಸಲಿ: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್

Update: 2020-06-25 17:33 GMT

ಲಂಡನ್, ಜೂ. 25: ತಮ್ಮ ನಡುವಿನ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಭಾರತ ಮತ್ತು ಚೀನಾಗಳು ಮಾತುಕತೆಯಲ್ಲಿ ತೊಡಗಬೇಕು ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಉಭಯ ದೇಶಗಳಿಗೆ ಕರೆ ನೀಡಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿರುವುದು ಕಳವಳದ ವಿಷಯ ಎಂದು ಹೇಳಿದ ಅವರು, ಪರಿಸ್ಥಿತಿಯ ಮೇಲೆ ಬ್ರಿಟನ್ ನಿಗಾ ಇಟ್ಟಿದೆ ಎಂದರು.

ಬ್ರಿಟನ್ ಸಂಸತ್ತಿನ ಒಂದು ಘಟಕವಾಗಿರುವ ಹೌಸ್ ಆಫ್ ಕಾಮನ್ಸ್‌ನಲ್ಲಿ ಬುಧವಾರ ನಡೆದ ತನ್ನ ವಾರದ ‘ಪ್ರೈಮ್ ಮಿನಿಸ್ಟರ್ಸ್‌ ಕ್ವೆಶ್ಚನ್ಸ್’ ಕಾರ್ಯಕ್ರಮದಲ್ಲಿ ಜಾನ್ಸನ್ ಈ ವಿಷಯದಲ್ಲಿ ತನ್ನ ಮೊದಲ ಅಧಿಕೃತ ಹೇಳಿಕೆಯನ್ನು ನೀಡಿದರು.

ಕಾಮನ್‌ವೆಲ್ತ್ ಸದಸ್ಯ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯಾಗಿರುವ ಭಾರತ ಮತ್ತು ನಮ್ಮ ಪ್ರಜಾಸತ್ತೆಯ ಕಲ್ಪನೆಯನ್ನೇ ಪ್ರಶ್ನಿಸುವ ದೇಶವಾಗಿರುವ ಚೀನಾ ನಡುವಿನ ಸಂಘರ್ಷವು ಬ್ರಿಟನ್‌ನ ಹಿತಾಸಕ್ತಿಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದ ಫ್ಲಿಕ್ ಡ್ರಮಂಡ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಲಡಾಖ್‌ನಲ್ಲಿ ನಡೆದಿರುವ ಸಂಘರ್ಷವು ಅತ್ಯಂತ ಗಂಭೀರ ಹಾಗೂ ಚಿಂತಾದಾಯಕ ಪರಿಸ್ಥಿತಿಗೆ ಕಾರಣವಾಗಿದೆ ’’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News