ರೈಲ್ವೇ ಖಾಸಗಿಕರಣದ ಕೇಂದ್ರದ ನಿರ್ಧಾರವನ್ನು ಜನತೆ ಎಂದಿಗೂ ಕ್ಷಮಿಸರು: ರಾಹುಲ್ ಗಾಂಧಿ

Update: 2020-07-02 16:00 GMT

ಹೊಸದಿಲ್ಲಿ, ಜು.2: ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಉಪಕ್ರಮವನ್ನು ಜನತೆ ಎಂದಿಗೂ ಕ್ಷಮಿಸಲಾರರು ಎಂದಿದ್ದಾರೆ.

ರೈಲ್ವೇಯ ಖಾಸಗೀಕರಣದತ್ತ ಗುರುವಾರ ಮೊದಲ ಹೆಜ್ಜೆ ಇರಿಸಿರುವ ಕೇಂದ್ರ ಸರಕಾರ, ಪ್ರಯಾಣಿಕರ ರೈಲನ್ನು ನಿರ್ವಹಿಸಲು ಖಾಸಗಿ ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಿದೆ. 35 ವರ್ಷಗಳ ಅವಧಿಗೆ ರೈಲನ್ನು ಖಾಸಗಿಯವರಿಗೆ ನಿರ್ವಹಿಸಲಾಗುವುದು ಎಂದು ಇದರಲ್ಲಿ ತಿಳಿಸಲಾಗಿದೆ. 109 ಮಾರ್ಗಗಳಲ್ಲಿ ಚಲಿಸುವ 151 ರೈಲುಗಳನ್ನು ಖಾಸಗಿಯವರಿಗೆ ವಹಿಸುವ ಮೂಲಕ 30,000 ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿಯಿದೆ ಎಂದು ರೈಲ್ವೇ ಇಲಾಖೆ ಹೇಳಿಕೆ ನೀಡಿತ್ತು.

ಬಡವರ ಜೀವಸೆಲೆಯಾಗಿರುವ ರೈಲ್ವೇಯನ್ನು ಸರಕಾರ ಅವರಿಂದ ಕಿತ್ತುಕೊಳ್ಳುತ್ತಿದೆ. ನಿಮಗೆ ಸಾಧ್ಯವಿರುವಷ್ಟನ್ನು ಕಿತ್ತುಕೊಳ್ಳಿ. ಆದರೆ ಒಂದನ್ನು ಮಾತ್ರ ಮರೆಯಬೇಡಿ, ಇದಕ್ಕೆ ಸೂಕ್ತ ಉತ್ತರವನ್ನು ಜನತೆ ನಿಮಗೆ ನೀಡಲಿದ್ದಾರೆ ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News