ಕೋವಿಡ್-19: ಭಾರತದಲ್ಲಿ 24 ಗಂಟೆಗಳಲ್ಲಿ 24,248 ಹೊಸ ಪ್ರಕರಣ ಪತ್ತೆ

Update: 2020-07-06 06:03 GMT

 ಹೊಸದಿಲ್ಲಿ,ಜು.7: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 24,248 ಹೊಸ ಪ್ರಕರಣಗಳು ವರದಿಯಾಗಿದೆ. ಒಂದೇ ದಿನದಲ್ಲಿ ಗರಿಷ್ಟ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸತತ ನಾಲ್ಕನೇ ದಿನ 20,000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ. ಒಂದೇ ದಿನದಲ್ಲಿ 425 ಮಂದಿ ಸಾವನ್ನಪ್ಪಿದ್ದಾರೆ.

ಹೊಸ ಪ್ರಕರಣಗಳು ಹಾಗೂ ಸಾವಿನಿಂದಾಗಿ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,97,413 ತಲುಪಿದೆ. ಸಾವಿನ ಸಂಖ್ಯೆಯು 19,693 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದಿಲ್ಲಿಯು 10,000 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾರಂಭಿಸಿರುವ ಕಾರಣ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಎಂದಿನಂತೆ ಗರಿಷ್ಟ ಪ್ರಕರಣಗಳು ವರದಿಯಾಗಿದ್ದು, ಆ ನಂತರ ತಮಿಳುನಾಡು, ದಿಲ್ಲಿ, ಗುಜರಾತ್, ಉತ್ತರಪ್ರದೇಶ,ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳಿವೆ. ಚೇತರಿಕೆಯ ಪ್ರಮಾಣ ಶೇ.60.85ರಲ್ಲಿ ನಿಂತಿದೆ. ದೇಶಾದ್ಯಂತ ಮಾರಣಾಂತಿಕ ಕಾಯಿಲೆಯಿಂದ 4,24,433 ರೋಗಿಗಳು ಚೇತರಿಸಿಕೊಂಡಿದ್ದಾರೆ.

ರವಿವಾರ ಒಟ್ಟು ಕೊರೋನ ವೈರಸ್ ಪ್ರಕರಣ 6.9 ಲಕ್ಷವನ್ನು ದಾಟುವ ಮೂಲಕ ಭಾರತ ವಿಶ್ವದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳಿರುವ ದೇಶಗಳ ಪಟ್ಟಿಯಲ್ಲಿ ರಶ್ಯವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News