ಚಿಕ್ಕಮಗಳೂರು: ಕೋವಿಡ್-19 ಜನಜಾಗೃತಿ ಅಭಿಯಾನಕ್ಕೆ ಚಾಲನೆ

Update: 2020-07-06 07:54 GMT

ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ಮತ್ತು ವಿವಿಧ ಸುನ್ನಿ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಕೊರೋನ ಜನಜಾಗೃತಿ ಅಭಿಯಾನವನ್ನು ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಶಾಹಿದ್ ರಜ್ವಿ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ನಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಅನ್ನು ವಿತರಿಸಲಾಯಿತು. ವೈದ್ಯರು ಕೊರೋನ ಕುರಿತ ಮಾರ್ಗದರ್ಶನವನ್ನು ಹಾಗು ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬೇಕಾದ ಸಲಹೆ ನೀಡಿದರು.

ವಾಹನದೊಂದಿಗೆ ಚಿಕ್ಕಮಗಳೂರು ಜಿಲ್ಲಾದ್ಯoತ ಧ್ವನಿವರ್ಧಕ ಮೂಲಕ ಜನರಲ್ಲಿ ಕೋರೋನ ಜನಜಾಗೃತಿ ಮೂಡಿಸಲು ಸಂಚರಿಸಿ ಮತ್ತು ಸಾರ್ವನಿಕರಿಗೆ ಉಚತವಾಗಿ ಮಾಸ್ಕ್ ವಿತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ನ ನಾಯಕರಾದ ಯೂಸುಫ್ ಹಾಜಿ, ಕೆ. ಪಿ. ಅಬೂಬಕ್ಕರ್, ಆರಿಫ್ ಅಲಿ ಖಾನ್, ವಕ್ಫ್ ಸಲಹಾ ಸಮಿತಿ ಸದಸ್ಯ ಮನ್ಸೂರ್ ಅಹಮದ್, ನಾಸಿರ್ ಟಿ. ಎಂ, ಗೌಸ್ ಮೊಹಿದ್ದೀನ್,ಮುನೀರ್, ಇನ್ನಿತರು ಭಾಗವಹಿಸಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫಿರೋಜ್ ಅಹಮದ್ ರಜ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News