ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಕೊರೋನ ಸೋಂಕು ದೃಢ

Update: 2020-07-06 08:06 GMT

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಪತ್ನಿಗೆ ಕೊರೋನ ಸೋಂಕು ದೃಢಪಟ್ಟಿದೆ. 

ಶನಿವಾರ ವಿಪ ಸದಸ್ಯರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಸ್ವಾಬ್ ಪರೀಕ್ಷೆಯ ಬಳಿಕ ಪತಿ, ಪತ್ನಿಯಲ್ಲೂ ಪಾಸಿಟಿವ್ ಇರುವದು ಪ್ರಯೊಗಾಲಯದ ವರದಿಯಿಂದ ದೃಢಪಟ್ಟಿದೆ.

ವಿಧಾನ ಪರಿಷತ್ ಸದಸ್ಯರ ಪತ್ನಿ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದರೆಂದು ತಿಳಿದು ಬಂದಿದೆ. ಇಬ್ಬರನ್ನೂ ಚಿಕ್ಕಮಗಳೂರು ನಗರದ  ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News