ಪಿಜಿಇಟಿ-2020: ಎರಡನೆ ಸುತ್ತಿನ ಸೀಟು ಹಂಚಿಕೆ

Update: 2020-07-06 18:30 GMT

ಬೆಂಗಳೂರು, ಜು.6: ಸರಕಾರದ ನಿರ್ದೇಶನದಂತೆ, ಪಿಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರಾಧಿಕಾರವು ಎರಡನೆ ಸುತ್ತಿನ ಸೀಟು ಹಂಚಿಕೆಯನ್ನು ನಡೆಸುತ್ತಿದೆ. ಈ ಸುತ್ತಿನಲ್ಲಿ ಮೊದಲನೆ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ, ರದ್ದುಪಡಿಸಿಕೊಂಡಿರುವ ಅಥವಾ ಹೊಸದಾಗಿ ಸೇರ್ಪಡೆಯಾದ ಸೀಟುಗಳಿದ್ದಲ್ಲಿ ಅಂತಹ ಸೀಟುಗಳನ್ನು ಹಂಚಿಕೆಗೆ ಪರಿಗಣಿಸಲಾಗುವುದು.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಜು.3ರಂದು ಅಖಿಲ ಭಾರತ ಕೋಟದಲ್ಲಿ ಹಂಚಿಕೆಯಾಗದೆ ರಾಜ್ಯಕ್ಕೆ ಹಿಂತಿರುಗಿಸಿರುವ ಪಿಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ಸೀಟುಗಳಿಗೆ ಹೊಸದಾಗಿ ಸೀಟು ಮ್ಯಾಟ್ರಿಕ್ಸ್ ಅನ್ನು ನೀಡಿದ್ದಾರೆ. ಇವುಗಳಲ್ಲಿ 188 ಪಿಜಿ ವೈದ್ಯಕೀಯ ಪದವಿ, 1 ಡಿಪ್ಲೊಮಾ ಮತ್ತು 2 ದಂತ ವೈದ್ಯಕೀಯ ಸೀಟುಗಳಿವೆ.

ಅಭ್ಯರ್ಥಿಗಳು ಜು.6ರ ಸಂಜೆ 6 ರಿಂದ ಜು.9ರ ಬೆಳಗ್ಗೆ 11ರ ವರೆಗೆ ಇಚ್ಛೆ/ ಆಯ್ಕೆಗಳನ್ನು ದಾಖಲಿಸಬಹುದು. ಎರಡನೆ ಸುತ್ತಿಗೆ ಸಂಬಂಧಿಸಿದಂತೆ, ಒಟ್ಟಾರೆ ಲಭ್ಯವಿರುವ ಸೀಟುಗಳ ಮಾಹಿತಿಯನ್ನು, ಸೂಚನೆಗಳನ್ನು ಮತ್ತು ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.inನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News