ಸಿಬಿಎಸ್ ಇ: 9ರಿಂದ 12ನೆ ತರಗತಿವರೆಗೆ 30 ಶೇ.ದಷ್ಟು ಪಠ್ಯಕ್ರಮಕ್ಕೆ ಕತ್ತರಿ

Update: 2020-07-07 12:56 GMT

ಹೊಸದಿಲ್ಲಿ: 2020-21ನೆ ಸಾಲಿನಲ್ಲಿ 9ನೆ ತರಗತಿಯಿಂದ 12ನೆ ತರಗತಿಯವರೆಗೆ ಪಠ್ಯದಲ್ಲಿ 30 ಶೇಕಡದಷ್ಟು ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಸಿಬಿಎಸ್ ಇ ಇಂದು ಘೋಷಿಸಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ಹಲವು ದಿನಗಳು ಕಳೆದು ಹೋಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

“ದೇಶ ಮತ್ತು ವಿಶ್ವದಲ್ಲಿರುವ ಪರಿಸ್ಥಿತಿಯನ್ನು ಮನಗಂಡು 9ರಿಂದ 12ನೆ ತರಗತಿವರೆಗಿನ ಪಠ್ಯದಲ್ಲಿ ಕಡಿತಗೊಳಿಸಲು ಸಿಬಿಎಸ್ ಇಗೆ ತಿಳಿಸಲಾಗಿದೆ” ಎಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

ಪ್ರಮುಖ ಪಠ್ಯಗಳನ್ನು ಉಳಿಸಿಕೊಂಡು ಉಳಿದ 30 ಶೇ.ದಷ್ಟು ಪಠ್ಯಗಳನ್ನು ಕೈಬಿಡಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News