ತುಮಕೂರು: ಕೊರೋನ ಸೋಂಕಿತರ ಸಂಖ್ಯೆ 292ಕ್ಕೆ ಏರಿಕೆ, ಒಟ್ಟು 10 ಸಾವು

Update: 2020-07-07 14:08 GMT

ತುಮಕೂರು,ಜು.7: ಜಿಲ್ಲೆಯಲ್ಲಿಂದು 24 ಹೊಸ ಕೊವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಇಂದು ಪಾವಗಡ ತಾಲೂಕಿನಲ್ಲಿ 14, ಗುಬ್ಬಿ-3, ಕೊರಟಗೆರೆ-2 ಹಾಗೂ ಚಿಕ್ಕನಾಯಕನಹಳ್ಳಿ ಕುಣಿಗಲ್, ಮಧುಗಿರಿ, ತುಮಕೂರು, ಹಾಗೂ ತುರುವೇಕೆರೆ ತಾಲೂಕಿನಲ್ಲಿ ತಲಾ ಒಂದು ಸೇರಿ ಒಟ್ಟು 24 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಅಲ್ಲದೆ ಓರ್ವ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಇಂದು ಆಸ್ಪತ್ರೆಯಿಂದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 67 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 215 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 10 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್.ಓ. ಡಾ.ನಾಗೇಂದ್ರಪ್ಪ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News