ಪುಲ್ವಾಮಾ ಉಗ್ರರ ದಾಳಿ ಪ್ರಕರಣ: ಸ್ಥಳೀಯ ನಿವಾಸಿಯ ಬಂಧನ

Update: 2020-07-07 17:45 GMT

ಪುಲ್ವಾಮಾ ಉಗ್ರರ ದಾಳಿ ಪ್ರಕರಣ: ಸ್ಥಳೀಯ ನಿವಾಸಿಯ ಬಂಧನ

ಜಮ್ಮು, ಜು.7: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ 2019ರಲ್ಲಿ ನಡೆದಿದ್ದ ಸಿಆರ್ ಪಿಎಫ್ ಪಡೆಗಳ ವಾಹನಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಉಗ್ರರಿಗೆ ನೆರವು ನೀಡಿದ್ದ ಆರೋಪದಲ್ಲಿ ಪುಲ್ವಾಮ ನಿವಾಸಿಯೊಬ್ಬನನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ( ಎನ್ಐಎ) ಹೇಳಿದೆ.

ಪುಲ್ವಾಮಾ ಜಿಲ್ಲೆಯ ಕಾಕಪೋರ ಗ್ರಾಮದ ನಿವಾಸಿ, ಮರದ ಮಿಲ್ ನ ಮಾಲಕನಾಗಿರುವ ಬಿಲಾಲ್ ಅಹ್ಮದ್ ಕುಚೆ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನನ್ನು ಜಮ್ಮುವಿನ ನಿಯೋಜಿತ ನ್ಯಾಯಾಲಯದೆದುರು ಹಾಜರುಪಡಿಸಿದ್ದು 10 ದಿನದ ಅವಧಿಗೆ ಎನ್ಐಎ ವಶಕ್ಕೆ ವಿಚಾರಣೆಗಾಗಿ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈತ ತನ್ನ ಮನೆಯನ್ನು ಅಡಗುದಾಣವಾಗಿ ಬಳಸಲು ಉಗ್ರರಿಗೆ ಅವಕಾಶ ಮಾಡಿಕೊಟ್ಟಿದ್ದ. ಅಲ್ಲದೆ ಅಧಿಕ ಶಕ್ತಿಯ ಮೊಬೈಲ್ ಫೋನ್ ಗಳನ್ನು ಒದಗಿಸಿ, ಪಾಕ್ ಮೂಲದ ಉಗ್ರ ಸಂಘಟನೆ ಜೈಷೆ ಮುಹಮ್ಮದ್ ಜೊತೆ ಸಂಪರ್ಕ ಸಾಧಿಸಲು ನೆರವಾಗಿದ್ದ. ಈತ ಒದಗಿಸಿದ್ದ ಮೊಬೈಲ್ ಬಳಸಿಯೇ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದರ್ ತನ್ನ ವೀಡಿಯೊ ಸಂದೇಶ ದಾಖಲಿಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News