ಗೋಣಿಕೊಪ್ಪದ ನೇತಾಜಿ ಲೇಔಟ್‍ನ 40 ಮನೆಗಳು ಸೀಲ್‍ಡೌನ್

Update: 2020-07-07 17:48 GMT

ಮಡಿಕೇರಿ, ಜು.7: ಕೊರೋನ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪದ ನೇತಾಜಿ ಲೇಔಟ್‍ನ ಮೊದಲನೇ ಅಡ್ಡ ರಸ್ತೆಯ ಒಂದು ಭಾಗವನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಗ್ರಾಮದ ವ್ಯಕ್ತಿಯೋರ್ವರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ಭಾಗದ 40 ಮನೆಗಳ 125 ಮಂದಿಯನ್ನು ಸಂಪರ್ಕ ತಡೆಯಲ್ಲಿಡಲಾಗಿದೆ.

ವಿರಾಜಪೇಟೆ ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್ ಕುಮಾರ್, ಕಂದಾಯ ಅಧಿಕಾರಿ ಸಿ.ಯು.ರಾಧಾಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ಎಸ್.ಎನ್.ಮಂಜುನಾಥ್, ಸುನಿಲ್, ರಾಜೇಶ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ನವೀನ್, ರಾಜು, ಆರೋಗ್ಯ ಕಾರ್ಯಕರ್ತೆ ಸುಜಾತ, ಆಶಾ ಕಾರ್ಯಕರ್ತೆ ಪ್ರಿಯಾ ಮತ್ತಿತರರು ಹಾಜರಿದ್ದರು. 

ಗೋಣಿಕೊಪ್ಪ 2 ದಿನ ಬಂದ್
ಕೊರೋನಾ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪದಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.8 ಮತ್ತು 9 ರಂದು ಬಂದ್ ಮಾಡಲು ಗ್ರಾ.ಪಂ ನಿರ್ಧರಿಸಿದೆ.

ಜನರ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಪಟ್ಟಣವನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಪಂಚಾಯತ್ ಕೋರಿದೆ. ಅಲ್ಲದೇ ಸಮಸ್ಯೆ ಬಗೆಹರಿಯುವವರೆಗೂ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ವ್ಯಾಪಾರ ವಹಿವಾಟು ನಡೆಸುವಂತೆ ಸಲಹೆ ನೀಡಿದೆ.
ಗ್ರಾ.ಪಂ ಪ್ರಭಾರ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಬಂದ್ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ಮಾಹಿತಿ ನೀಡಿದರು. 

ಈ ಸಂದರ್ಭ ಮುರುಗ, ಜೆ.ಕೆ.ಸೋಮಣ್ಣ, ರಾಮಕೃಷ್ಣ, ಮಂಜುಳ ಮತ್ತಿತರ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News