ಕಲಬುರಗಿಯಲ್ಲಿ ಮತ್ತೊಬ್ಬ ಶಾಸಕರಿಗೆ ಕೊರೋನ ಪಾಸಿಟಿವ್

Update: 2020-07-10 12:26 GMT

ಕಲಬುರಗಿ, ಜು.10: ಜಿಲ್ಲೆಯಲ್ಲಿ ಕೊರೋನ ವೈರಸ್ ಶಾಸಕರ ವಲಯಕ್ಕೆ ಕಾಲಿಟ್ಟಿದ್ದು, ಇಂದು ಮತ್ತೋರ್ವ ಶಾಸಕರಿಗೆ ವೈರಸ್ ತಗಲಿರುವ ಬಗ್ಗೆ ದೃಢ ಪಟ್ಟಿದೆ.

ನಿನ್ನೆಯಷ್ಟೆ ಸೇಡಂ ಶಾಸಕರೊಬ್ಬರಿಗೆ ಕೊರೋನ ದೃಢಪಟ್ಟಿತ್ತು. ಇಂದು ಜಿಲ್ಲೆಯ ಮತ್ತೊಬ್ಬರು ಶಾಸಕರಿಗೆ ಕೊರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕರು ತನ್ನ ಸಂಪರ್ಕಕ್ಕೆ ಬಂದಿರುವ ಬೆಂಬಲಿಗರು ಹಾಗೂ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯದ ಸಂಸದೆ, ವಿಧಾನಸ ಪರಿಷತ್ ಸದಸ್ಯರು ಸೇರಿ ಹಲವು ಶಾಸಕರಿಗೆ ಕೊರೋನ ಸೋಂಕು ತಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News