ವಿಶ್ವ ಜನಸಂಖ್ಯಾ ದಿನ: ಜಾಗೃತಿ ಮೂಡಿಸಲು ವಿಪಕ್ಷ ನಾಯಕ, ಸಚಿವರಿಂದ ಕರೆ

Update: 2020-07-11 13:38 GMT

ಬೆಂಗಳೂರು, ಜು.11: ವಿಶ್ವ ಜನಸಂಖ್ಯಾ ದಿನದ ಹಿನ್ನೆಲೆಯಲ್ಲಿ ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಉಪಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕರೆ ನೀಡಿದ್ದಾರೆ.

`ಜನಸಂಖ್ಯೆಗೆ ನಿಯಂತ್ರಣ ಇರಲಿ, ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಧ್ಯೇಯ ನಮ್ಮದಾಗಲಿ, ಆರೋಗ್ಯ, ವಿದ್ಯೆ, ಉದ್ಯೋಗ ಎಲ್ಲರಿಗೂ ಒದಗಿ ಬರಲಿ, ಲಿಂಗತಾರತಮ್ಯ, ಬಾಲ್ಯವಿವಾಹದಂತಹ ಅನಿಷ್ಟಗಳ ವಿರುದ್ಧ ನಮ್ಮ ವಿರೋಧ ಇರಲಿ. ಈ ಜಾಗೃತಿ ವಿಶ್ವ ಜನಸಂಖ್ಯಾ ದಿನ ನಮ್ಮಲ್ಲಿ ಮೂಡಿಸಲಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಿಳುವಳಿಕೆ ಮೂಡಿಸೋಣ: `ಜಾಗತಿಕ ಮಹಾಮಾರಿ ಕೊರೋನ ಸೋಂಕಿನ ಸಂದರ್ಭದಲ್ಲಿ ಮಹಿಳೆ ಮತ್ತು ಬಾಲಕಿಯರ ಆರೋಗ್ಯ ಮತ್ತು ಹಕ್ಕುಗಳನ್ನು ಕಾಪಾಡಬೇಕೆನ್ನುವುದು ಈ ಬಾರಿಯ ಜನಸಂಖ್ಯಾ ದಿನದ ಘೋಷ ವಾಕ್ಯವಾಗಿದೆ. ಚಿಕ್ಕ ಚೊಕ್ಕ ಕುಟುಂಬದ ಅಗತ್ಯವನ್ನು ಕುರಿತು ಎಲ್ಲರಲ್ಲೂ ತಿಳುವಳಿಕೆ ಮೂಡಿಸೋಣ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವಿಟ್ಟರ್ ಮೂಲಕ ಸಲಹೆ ನೀಡಿದ್ದಾರೆ.

ಮಾನವ ಹಕ್ಕುಗಳ ಬಗ್ಗೆ ಜಾಗೃತಿ: `ಜನರು ಸಮಸ್ಯೆಗಳು ಮತ್ತು ಆರೋಗ್ಯಕರ ಜೀವನ ಹಾಗೂ ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರವು ಮೂಡಿಸುವುದು, ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶುಮರಣ, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಜನಸಂಖ್ಯಾ ದಿನದ ಉದ್ದೇಶ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದಿಸಿದ್ದಾರೆ.

`ಕೊರೋನ ಸೋಂಕಿನ ಯಾವುದೇ ಲಕ್ಷಣಗಳಿದ್ದಿದ್ದರೂ ತಮ್ಮಿಂದ ಯಾರಿಗೂ ತೊಂದರೆಯಾಗಬಾರದೆಂಬ ಕಾರಣಕ್ಕೆ ತಮ್ಮ ಜಮೀನಿನ ತಾತ್ಕಾಲಿಕ ಶೆಡ್‍ನಲ್ಲಿರುವ ಗದಗ ಜಿಲ್ಲೆಯ ಅಂತುರು-ಬೆಂತೂರು ಗ್ರಾಮದ ಯೋಧ ಪ್ರಕಾಶ್ ಹೈಗರ್ ಅವರ ಮಾದರಿ ನಡೆ ಅನುಕರಣೀಯ. ಊರಲ್ಲೇ ಕ್ವಾರಂಟೈನ್ ಆಗಲು ಅವಕಾಶವಿದ್ದಾಗಲೂ ಚಳಿ, ಮಳೆ ಬಿಸಿಲೆನ್ನದೆ ದೇಶದ ಗಡಿ ಕಾಯುವ ಈ ಯೋಧ ತಮ್ಮ ಗ್ರಾಮದ ಜನರಿಗಾಗಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಗೌರವಿಸೋಣ, ಅಭಿನಂದಿಸೋಣ'

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News