ಕೊರೋನ ಸೋಂಕು: ವಿಶ್ವದಲ್ಲಿ ವರದಿಯಾಗುವ ಪ್ರಕರಣಗಳಲ್ಲಿ ಭಾರತದ ಪಾಲು ಶೇ.12

Update: 2020-07-12 03:40 GMT

ಹೊಸದಿಲ್ಲಿ, ಜು.12: ಭಾರತದಲ್ಲಿ ಕೊರೋನ ವೈರಸ್ ಸೋಂಕಿನ ನಾಗಾಲೋಟ ಮುಂದುವರಿದಿದೆ. ಒಟ್ಟು ಪ್ರಕರಣಗಳ ಸಂಖ್ಯೆ ಎಂಟು ಲಕ್ಷದ ಗಡಿ ದಾಟಿದ ಮರುದಿನವೇ 8.5 ಲಕ್ಷಕ್ಕೇರಿದೆ. ಶನಿವಾರ ಒಂದೇ ದಿನ ದೇಶದಲ್ಲಿ 29 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, ಸತತ ನಾಲ್ಕನೇ ದಿನ ಗರಿಷ್ಠ ಪ್ರಕರಣಗಳ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ದೈನಿಕ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳಲ್ಲಿ ಭಾರತದ ಪಾಲು ಶೇಕಡ 12ಕ್ಕೇರಿದೆ. ವಿಶ್ವದಲ್ಲಿ ಒಂದೇ ದಿನ 2.37 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಭಾರತದ ಪಾಲು ಶೇಕಡ 11.8ರಷ್ಟು ಎಂದು ವಲ್ಡೋಮೀಟರ್ಸ್‌ ಡಾಟ್ ಇನ್ಫೋ ವೆಬ್‌ಸೈಟ್ ಹೇಳಿದೆ. ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 17.5ರಷ್ಟು ಪಾಲು ಹೊಂದಿರುವ ಭಾರತದಲ್ಲಿ ಕಳೆದ ಜೂನ್‌ನಿಂದೀಚೆಗೆ ಪ್ರಕರಣಗಳು ಹೆಚ್ಚುತ್ತಿವೆ. ಜೂನ್ 12ರಂದು ಭಾರತದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ವಿಶ್ವದ ಒಟ್ಟು ಪ್ರಕರಣಗಳ ಶೇಕಡ 8.1ರಷ್ಟಿತ್ತು.

ಶನಿವಾರ ಭಾರತದಲ್ಲಿ 28,998 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,50,052ಕ್ಕೇರಿದೆ. ಒಟ್ಟು 22,664 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News