ಜುಲೈ 14ರಿಂದ ಭಾರತದ ಆಗಸದಲ್ಲಿ ಅಪರೂಪದ ಧೂಮಕೇತು : ವೀಕ್ಷಣೆ ಹೇಗೆ?

Update: 2020-07-12 12:13 GMT

ಭುವನೇಶ್ವರ: ಭಾರತದಲ್ಲಿ ಜುಲೈ 14ರಿಂದ ನಿಯೋವೈಸ್ (ಸಿ/2020 ಎಫ್3) ಧೂಮಕೇತು ವೀಕ್ಷಿಸುವ ಅಪರೂಪದ ಅವಕಾಶವಿದೆ. ಈ ಅಪರೂಪದ ಧೂಮಕೇತು 20 ದಿನಗಳ ಕಾಲ ಸೌರಮಂಡಲದಲ್ಲಿ ತೇಲಾಡಲಿದೆ ಎಂದು ಒಡಿಶಾ ಪಠಾಣಿ ಸಮಂತ ತಾರಾಲಯದ ಉಪನಿರ್ದೇಶಕ ಸುಭೇಂದು ಪಟ್ನಾಯಕ್ ಹೇಳಿದ್ದಾರೆ.

ಪ್ರತಿದಿನ ಸುಮಾರು 20 ನಿಮಿಷಗಳ ಕಾಲ ಇದು ಬರಿಗಣ್ಣಿಗೆ ಗೋಚರವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾಸಾದ Near Earth Wide-field Infrared Survey Explorer ಕಳೆದ ಮಾರ್ಚ್‍ ನಲ್ಲಿ ಈ ಧೂಮಕೇತುವನ್ನು ಪತ್ತೆ ಮಾಡಿದ್ದು, ಜುಲೈ 22-23ರ ವೇಳೆಗೆ ಇದು ಭೂಮಿಯ ಅತಿ ಸನಿಹಕ್ಕೆ ಬರಲಿದೆ. ವಾಯುವ್ಯ ಆಗಸದಲ್ಲಿ ಮುಂದಿನ ವಾರ ಇದು ಕಂಡುಬರಲಿದೆ ಎಂದು ಅವರು ವಿವರಿಸಿದ್ದಾರೆ.

ಜುಲೈ 14ರಿಂದ 20 ದಿನಗಳ ಕಾಲ ಸೂರ್ಯಾಸ್ತದ ಬಳಿಕ ಸುಮಾರು 20 ನಿಮಿಷ ಕಾಲ ಇದು ಗೋಚರಿಸಲಿದೆ. ಬರಿಗಣ್ಣಿನಲ್ಲಿ ಜನರು ಇದನ್ನು ನೋಡಬಹುದಾಗಿದೆ ಎಂದು ಹೇಳಿದ್ದಾರೆ. ಈ ಧೂಮಕೇತು ಮೇಲ್ಮುಖವಾಗಿ ವೇಗವಾಗಿ ಚಲಿಸುವುದನ್ನು ವೀಕ್ಷಿಸಬಹುದು ಎಂದಿದ್ದಾರೆ.

ಆಗಸ್ಟ್ ವೇಳೆಗೆ ಇದು ಮಬ್ಬಾಗಲಿದ್ದು, ಬಳಿಕ ಬರಿಗಣ್ಣಿಗೆ ಗೋಚರಿಸಲಾರದು. ಬೈನಾಕ್ಯುಲರ್‍ ಅಥವಾ ಟೆಲಿಸ್ಕೋಪ್ ಮೂಲಕ ಇದನ್ನು ಮತ್ತಷ್ಟು ಸ್ಪಷ್ಟವಾಗಿ ನೋಡಬಹುದಾಗಿದೆ ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News