ಹಾಸ್ಯ ಕಲಾವಿದೆಗೆ ಅತ್ಯಾಚಾರದ ಬೆದರಿಕೆಯೊಡ್ಡಿದವನ ವಿರುದ್ಧ ಕ್ರಮ: ಗುಜರಾತ್ ಪೊಲೀಸರಿಗೆ ಎನ್ ಸಿಡಬ್ಲ್ಯು ಆಗ್ರಹ

Update: 2020-07-12 15:19 GMT

ಹೊಸದಿಲ್ಲಿ,ಜು.12: ಹಾಸ್ಯ ಕಲಾವಿದೆಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ ಹಾಗೂ ಅತ್ಯಾಚಾರದ ಬೆದರಿಕೆಯೊಡ್ಡಿದ ದುಷ್ಕರ್ಮಿಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯು) ಗುಜರಾತ್ ಪೊಲೀಸರಿಗೆ ಸೂಚನೆ ನೀಡಿದೆ.

 ಗುಜರಾತ್  ನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಿವಾನಂದ ಝಾ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗವು ಈ ಬಗ್ಗೆ ಪತ್ರ ಬರೆದಿದೆ. ಆರೋಪಿಯು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದನೆನ್ನಲಾದ ಅತ್ಯಾಚಾರದ ಬೆದರಿಕೆಯೊಡ್ಡುವ ಹಾಗೂ ನಿಂದಿಸುವ ವಿಡಿಯೋವನ್ನು ಕೂಡಾ ಪುರಾವೆಯಾಗಿ ಸಲ್ಲಿಸಿದೆ.

  ಮಹಿಳೆಯರಿಗೆ ಸುರಕ್ಷಿತ ಆನ್ಲೈನ್ ಸೃಷ್ಟಿಸಲು ಹಾಗೂ ಸೈಬರ್ ಭದ್ರತೆಯನ್ನು ಖಾತರಿಪಡಿಸಲು ಎನ್ಸಿಡಬ್ಲ್ಯು ಬದ್ಧವಾಗಿದೆ. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಪ್ರಚೋದನೆ ನೀಡಲು ಸೈಬರ್ ಜಾಲದ ಬಳಕೆ ಹೆಚ್ಚುತ್ತಿರುವ ಬಗ್ಗೆ ಅದು ಕಳವಳಗೊಂಡಿದೆ’’ ಎಂದು ಎಸಿಡಬ್ಲು ಅದ್ಯಕ್ಷೆ ರೇಖಾ ಶರ್ಮಾ ಶನಿವಾರ ತಡರಾತ್ರಿ ಗುಜರಾತ್ ಪೊಲೀಸರಿಗೆ ರವಾನಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

  ‘‘ಈ ವಿಷಯದ ಸೂಕ್ಷ್ಮಸಂವೇದಿತನವನ್ನು ಪರಿಗಣನೆಗೆ ತೆಗೆದುಕೊಂಡು, ಮಾಹಿತಿ ತಂತ್ರದ್ಞಾನ ಕಾಯ್ದೆ 2000ರ ಅನ್ವಯ ದುಷ್ಕರ್ಮಿಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಆ ಬಗ್ಗೆ ಆಯೋಗಕ್ಕೆ ಮಾಹಿತಿಯನ್ನು ಒದಗಿಸುತ್ತಾ ಇರಬೇಕು’’ ಎಂದು ಶರ್ಮಾ ಗುಜರಾತ್ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News