ಅಮೆರಿಕ: 66,000 ಮೀರಿದ ದೈನಂದಿನ ಕೊರೋನ ಸೋಂಕು ಪ್ರಕರಣ

Update: 2020-07-12 15:33 GMT

ವಾಶಿಂಗ್ಟನ್, ಜು. 12: ಅಮೆರಿಕದಲ್ಲಿ ಶನಿವಾರ 66,528 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು 24 ಗಂಟೆಗಳ ಅವಧಿಗೆ ಒಂದು ದಾಖಲೆಯಾಗಿದೆ.

ಇದರೊಂದಿಗೆ ದೇಶದಲ್ಲಿ ದಾಖಲಾಗಿರುವ ಒಟ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 32,42,073ಕ್ಕೆ ಏರಿದೆ ಎಂದು ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಸಂಗ್ರಹಿಸಿದ ಅಂಕಿ-ಸಂಖ್ಯೆಗಳು ತಿಳಿಸಿವೆ.

ಇದೇ ಅವಧಿಯಲ್ಲಿ 760 ಸಾವುಗಳು ಸಂಭವಿಸಿದ್ದು, ದೇಶದ ಒಟ್ಟು ಸಾವುಗಳ ಸಂಖ್ಯೆ 1,34,729ಕ್ಕೆ ಏರಿದೆ.

ಅಮೆರಿಕದಲ್ಲಿ ಕಳೆದ 5 ದಿನಗಳ ಪೈಕಿ ನಾಲ್ಕು ದಿನಗಳಲ್ಲಿ ದೈನಂದಿನ ನೂತನ ಸೋಂಕು ಪ್ರಕರಣಗಳ ಸಂಖ್ಯೆ 60,000ವನ್ನು ಮೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News