ಲಾಕ್‍ಡೌನ್‍ನಲ್ಲೂ ತಗ್ಗದ ರಸ್ತೆ ಅಪಘಾತಗಳ ಸಂಖ್ಯೆ: ರಾಜ್ಯದಲ್ಲಿ 812 ಮಂದಿ ಮೃತ್ಯು

Update: 2020-07-18 17:14 GMT

ಬೆಂಗಳೂರು, ಜು.18: ಲಾಕ್‍ಡೌನ್ ಸಂದರ್ಭದಲ್ಲೂ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ತಗ್ಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ರಾಜ್ಯವ್ಯಾಪಿ ಲಾಕ್‍ಡೌನ್ ಸಂದರ್ಭ 812 ಮಂದಿ ಅಪಘಾತಗಳಿಂದ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ಅಂತರ್ ರಾಜ್ಯ ರಸ್ತೆಗಳಲ್ಲಿ ಸಂಭವಿಸಿದ್ದ ಅಪಘಾತಗಳಲ್ಲಿ 281 ಮಂದಿ ಮೃತಪಟ್ಟರೆ, ಅಂತರ್ ಜಿಲ್ಲಾ ಮಾರ್ಗವಾಗಿ ಸಂಚಾರ ಮಾಡುವ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ 241 ಮಂದಿ ಹಾಗೂ ಇತರೆ ರಸ್ತೆಗಳಲ್ಲಿ 290 ಮಂದಿ ಸಾವನ್ನಪ್ಪಿದ್ದಾರೆ.

ಅದೇ ರೀತಿ, ಒಟ್ಟು 3691 ಮಂದಿ ಗಾಯಗೊಂಡಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ಲಾಕ್‍ಡೌನ್ ಸಮಯದಲ್ಲೂ ಅಪಘಾತ ಪ್ರಕರಣಗಳು ಗಣನೀಯ ಏರಿಕೆ ಕಂಡಿರುವುದು ಆತಂಕಕ್ಕೆ ಎಡೆಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News