ಸ್ವಯಂ ಲಾಕ್​ಡೌನ್ ಮಾಡಿಕೊಂಡ ಬೆನ್ನಿಗೇ ಜಾತ್ರೆ ನಡೆಸಿದ ಗ್ರಾಮಸ್ಥರು

Update: 2020-07-18 18:20 GMT

ವಿಜಯಪುರ, ಜು.18: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸ್ವಯಂ ಲಾಕ್​ಡೌನ್ ಮಾಡಿಕೊಂಡ ಬೆನ್ನಿಗೇ, ಕಾನೂನು ಉಲ್ಲಂಘಿಸಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲದೇ ಜಾತ್ರೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ಕೂಡಗಿ ಗ್ರಾಮದಲ್ಲಿ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆ ನಡೆಸಲಾಗಿದ್ದು, ಜಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಆದರೆ ಜಾತ್ರೆಯಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಪಾಲಿಸಿಲ್ಲ. ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಮರೆತು ನೂರಾರು ಮಂದಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಜಾತ್ರೆಯಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾತ್ರೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದು, ಗುಂಪಾಗಿ ಕುಳಿತು ಭೋಜನ ಮಾಡಿದ್ದಾರೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News