ಐಪಿಎಲ್‌ನಲ್ಲಿ ಆಡಲು ಸಿದ್ಧ: ಮ್ಯಾಕ್ಸ್‌ವೆಲ್

Update: 2020-07-22 04:56 GMT

ಮೆಲ್ಬೋರ್ನ್, ಜು.22: ಈ ವರ್ಷದ ಟ್ವೆಂಟಿ-20 ವಿಶ್ವಕಪ್ ಅಂತಿಮವಾಗಿ ರದ್ದಾಗಿರುವುದರಿಂದ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆಡಲು ಮಾನಸಿಕವಾಗಿ ಸಿದ್ಧರಾಗಿರುವುದಾಗಿ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಆಸ್ಟ್ರೇಲಿಯದ 17 ಮಂದಿ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದಾರೆ. ತವರು ನೆಲದಲ್ಲಿ ವಿಶ್ವಕಪ್ ರದ್ದಾದ ಕಾರಣ ನಿರಾಶೆಗೊಂಡಿದ್ದೇನೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದರೂ, ಐಪಿಎಲ್ ಆಡುವ ನಿರೀಕ್ಷೆಯಲ್ಲಿದ್ದಾರೆ.

ಅಕ್ಟೋಬರ್‌ನಲ್ಲಿ ಕ್ರಿಕೆಟ್‌ನಿಂದ ಸ್ವಯಂ-ವಿರಾಮದ ನಂತರ ಮ್ಯಾಕ್ಸ್ ವೆಲ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕಾಗಿ 26 ಮಂದಿಯ ಆಸ್ಟ್ರೇಲಿಯ ತಂಡದಲ್ಲಿ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News