ಜು.23ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ತರಗತಿ

Update: 2020-07-22 15:44 GMT

ಬೆಂಗಳೂರು, ಜು.22: ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುರುವಾರದಿಂದ ಯೂಟ್ಯೂಬ್ ಮೂಲಕ ಪ್ರಿ-ರೆಕಾರ್ಡೆಡ್ ತರಗತಿ ನಡೆಸಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಜುಲೈ ಹಾಗೂ ಆಗಸ್ಟ್ ನಲ್ಲಿ ಪ್ರಸಾರವಾಗಲಿರುವ ಯೂಟ್ಯೂಬ್ ತರಗತಿಗಳು ಪ್ರತಿದಿನ 45ನಿಮಿಷಗಳ 4ಅವಧಿಯ ತರಗತಿಗಳು ಇರಲಿವೆ. ಪ್ರತಿ ವಿಷಯಕ್ಕೆ ಎರಡು ಅವಧಿಯಾಗಿ ವಿಂಗಡಿಸಲಾಗಿದೆ. ಒಂದು ಅವಧಿಯಲ್ಲಿ ವಿಡಿಯೊ ತರಗತಿ ಇದ್ದರೆ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್ ಬರವಣಿಗೆಗೆ ಮೀಸಲಿರಿಸಲಾಗಿದೆ.

ಯೂಟ್ಯೂಬ್ https://www.youtube.com/c/dpuedkpucpa ಈ ಲಿಂಕನ್ನು ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರಿಂದ ಉಪನ್ಯಾಸಕರು ಪಡೆದು ತಮ್ಮ ವಿಷಯದ ವಿದ್ಯಾರ್ಥಿಗಳಿಗೆ ತಲುಪಿಸಿ, ಪ್ರತಿದಿನ ತರಗತಿಗಳನ್ನು ವೀಕ್ಷಿಸುವಂತೆ ನೋಡಿಕೊಳ್ಳಬೇಕು. ಆಯಾ ದಿನ ನಡೆದ ವಿಷಯಕ್ಕೆ ಸಂಬಂಧಿಸಿದ ನೋಟ್ಸ್‍ಗಳು ಅದೇ ದಿನ ಲಭ್ಯವಾಗಲಿದೆ.

ಒಂದು ವೇಳೆ ನಿಗದಿತ ವೇಳಾಪಟ್ಟಿಯಂತೆ ತರಗತಿಯನ್ನು ವೀಕ್ಷಿಸಲು ಸಾಧ್ಯವಾಗದಿದ್ದರೆ, ವಿದ್ಯಾರ್ಥಿಗಳು ಮೇಲಿನ ಲಿಂಕನ್ನು ಬಳಸಿ ಬೇರೆ ದಿನಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News