ಕ್ವಾರಂಟೈನ್ ಆದ ಪ್ರಭಾವಿಗಳಿಗೆ ಅರ್ಧ ಗಂಟೆಯಲ್ಲಿ ಅಂತಿಮ ವರದಿ, ಬಿಡುಗಡೆ: ಕ್ವಾರಂಟೈನ್ ಕೇಂದ್ರದಲ್ಲಿರುವವರ ಆರೋಪ

Update: 2020-07-24 12:41 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಜು.24: ಕ್ವಾರಂಟೈನ್ ಆಗಿ ಅವಧಿ ಮುಗಿಸಿದರೂ ಅಂತಿಮ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ವೈದ್ಯರು ನೆಪ ಹೇಳುತ್ತಾರೆ. ಆದರೆ ಪ್ರಭಾವಿಗಳಿಗೆ ಅರ್ಧ ಗಂಟೆಯಲ್ಲಿ ವರದಿಯನ್ನು ನೀಡಿ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರು ಆರೋಪಿಸಿದ್ದಾರೆ.

ಕೊರೋನ ಸೋಂಕು ದೃಢಪಟ್ಟ ಬಳಿಕ ಕಲಬುರಗಿ ನಗರದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಾಗುತ್ತಿತ್ತು. ಈಗಾಗಲೇ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದರೂ ಅಂತಿಮ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ಒಂದು ವಾರ ಕಳೆದರೂ ಬಿಡುಗಡೆಗೊಳಿಸುತ್ತಿಲ್ಲ. ಆದರೆ, ಪ್ರಭಾವಿಗಳಿಗೆ ಕ್ವಾರಂಟೈನ್ ಅವಧಿ ಮುಗಿದ ತಕ್ಷಣವೇ ಅರ್ಧ ಗಂಟೆಯಲ್ಲಿ ವರದಿಯನ್ನು ನೀಡಿ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಆರೋಪಿಸಿದರು.

ನಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಯಾವಾಗ ಅಂತಿಮ ವರದಿಯನ್ನು ನೀಡುತ್ತೀರಿ ಎಂದು ಕೇಳಿದರೆ ಇನ್ನೂ ವರದಿ ಬರುವುದು ತಡವಾಗುತ್ತದೆ ಎಂಬ ನೆಪ ಹೇಳುತ್ತಾರೆ. ಅಲ್ಲದೆ, ವರದಿ ಪಾಸಿಟಿವ್ ಎಂದು ಬಂದರೆ ಕ್ವಾರಂಟೈನ್‍ನಲ್ಲಿ ಇನ್ನಷ್ಟು ದಿನ ಇರಬೇಕಾಗುತ್ತದೆ ಎಂಬ ಮಾಹಿತಿಯನ್ನು ಒದಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ವರದಿಗಾಗಿ ವೈದ್ಯರು ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News