ಭೂ ಮಾಪಕರ ವರ್ಗಾವಣೆ

Update: 2020-07-24 16:39 GMT

ಬೆಂಗಳೂರು, ಜು.24: ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ತಪಾಸಕರು/ಭೂ ಮಾಪಕರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರ ಹೆಸರಿನ ಮುಂದೆ ತಿಳಿಸಿರುವ ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ, ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸೊರಬ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ತಪಾಸಕ ಎಚ್.ಆರ್.ರಾಜು ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೆ ಮುಂದುವರಿಸಲಾಗಿದೆ. ತಪಾಸಕ ರವಿಕುಮಾರ್ ಅವರನ್ನು ಕಲಬುರಗಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಎಂ.ಎಸ್.ಮಂಜುನಾಥ್ ಅವರನ್ನು ಹುಣಸೂರು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಎಂ.ವಿಶ್ರೀನಿವಾಸಮೂರ್ತಿ ಅವರನ್ನು ಕೊರಟಗೆರೆ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಅಫ್ಸರ್ ಜಹಾರ್ ಅವರನ್ನು ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ಉಪ ವಿಭಾಗದ ಇಂಜಿನಿಯರ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಹರೀಶ ತಿಮ್ಮಯ್ಯ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಮಂಜುನಾಥ ಯಳ್ಳೂರ ಅವರನ್ನು ಧಾರವಾಡ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ವಿಜಯಕುಮಾರ್ ಅವರನ್ನು ಯಾದಗಿರಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಅಭಿಲಾಷ ಗಂಗಾಧರ ಚಿನ್ನಪ್ಪನವರ ಅವರನ್ನು ಧಾರವಾಡ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಉಷಾ ನಾಯ್ಕ ಅವರನ್ನು ಸಿದ್ದಾಪುರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಮಂಜುನಾಥ ಹುಲ್ಲೂರು ಅವರನ್ನು ಸಾರ್ವಜನಿಕರ ದೂರಿನ ಮೇರೆಗೆ ಹೊಸಪೇಟೆ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಎನ್.ಸೋಮರೆಡ್ಡಿ ಅವರನ್ನು ಯಲಹಂಕ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಸಿ.ಇ.ಮಂಜುನಾಥ್ ಅವರನ್ನು ಕೆ.ಆರ್.ಪೇಟೆ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಅರಸೀಕೆರೆ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂ ಮಾಪಕ ಎನ್.ಮಂಜುನಾಥ್ ಅವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೆ ಮುಂದುವರಿಸಲಾಗಿದೆ(ಇವರ ಸ್ಥಳಕ್ಕೆ ವರ್ಗಾವಣೆ ಮಾಡಿದ್ದ ಹನುಮಂತಪ್ಪ ಅವರ ವರ್ಗಾವಣೆಯನ್ನು ಮಾರ್ಪಡಿಸಲಾಗಿದೆ). ಹೊಸಕೋಟೆ ತಾಲೂಕಿನ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂ ಮಾಪಕ ಹನುಮಂತಪ್ಪ ಅವರನ್ನು ಎನ್.ಮಂಜುನಾಥ್ ಅವರ ಜಾಗಕ್ಕೆ ವರ್ಗಾಯಿಸಿರುವುದನ್ನು ಮಾರ್ಪಡಿಸಲಾಗಿದೆ.

ಭೂ ಮಾಪಕರಾದ ಆರ್.ಶ್ರೀನಿವಾಸಪ್ಪ ಅವರನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ನಂಜೇಶ್‍ಗೌಡ ಬಿ.ಟಿ. ಅವರನ್ನು ತಿಪಟೂರು ತಾಲೂಕಿನ ನಂ.2-ಕಾವೇರಿ ನೀರಾವರಿ ನಿಗಮದ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಬಿ.ಸಿ.ಸುರೇಶ್ ಅವರನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಕುಮಾರಿ ಗೌಡ ಅವರನ್ನು ಕೆ.ಆರ್.ನಗರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಎನ್.ಸಿ.ಮಹೇಶ್ ಅವರನ್ನು ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಕೆ.ಜಿ.ಬಸವರಾಜು ಅವರನ್ನು ಮಂಡ್ಯ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಬಿ.ಸಿ.ಪ್ರಸನ್ನ ಅವರನ್ನು ಕಡೂರು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಕೆ.ಎಂ.ಸುರೇಶ್ ಅವರನ್ನು ಹುಣಸೂರು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಎಸ್.ಆರ್.ಚಂದ್ರಶೇಖರ್ ಅವರನ್ನು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ರಾಜರಾಜೇಶ್ವರಿ ಬಿ. ಅವರನ್ನು ನಂಜನಗೂಡು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ನಿಸಾರ್ ಪಾಷ ಅವರನ್ನು ರಾಮನಗರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಪ್ರಕಾಶ್ ರೆಡ್ಡಿ ಬಿ.ಎನ್. ಅವರನ್ನು ದೊಡ್ಡಬಳ್ಳಾಪುರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಅನಿಲ್ ಕುಮಾರ್ ಕೆ.ಎಸ್.ಅವರನ್ನು ದೇವನಹಳ್ಳಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕಿ ಭಾರತಿ ಟಿ.ಜೆ. ಅವರನ್ನು ಬೆಂಗಳೂರಿನ ನಗರ ಮಾಪನ ತಂಡ-1ರ ವಿಚಾರಣಾಧಿಕಾರಿಯಾಗಿ, ಪುಟ್ಟರಾಜು ಎಂ.ಎನ್.ಅವರನ್ನು ಹೊಸಕೋಟೆ ತಾಲೂಕಿನ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಬಿ.ಎಂ.ಮಹೇಶ್ವರಿ ಅವರನ್ನು ಮಂಡ್ಯ ತಾಲೂಕಿನ ದುದ್ದ ನಂ.35 ಕಾವೇರಿ ನಿಗಮ ಎಚ್‍ಎಲ್‍ಬಿಎಲ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಭೂ ಮಾಪಕರಾದ ಡಿ.ಆರ್.ನವ್ಯ ಶ್ರೀ ಹಾಗೂ ಸಿ.ಎಸ್.ಲಕ್ಷ್ಮಿ ಅವರನ್ನು ಮೈಸೂರು ಜಿಲ್ಲೆಯ ನಗರ ಮಾಪನ ಯೋಜನಾಧಿಕಾರಿ ಕಚೇರಿಗೆ, ಆರ್.ಪಿ.ಶಿವಕುಮಾರ್ ಸ್ವಾಮಿಯನ್ನು ತಿಪಟೂರು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ, ಬಿ.ಸಿ.ಅನಂತ ಅವರನ್ನು ಸಾರ್ವಜನಿಕ ದೂರಿನ ಮೇರೆಗೆ ಅರಕಲಗೂಡು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಬಿ.ವಿ.ಲೋಕೇಶ್ ಎಂಬುವವರನ್ನು ಬೆಂಗಳೂರು ದಕ್ಷಿಣ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ(ಭೂ ಮಾಪನ) ಸರಕಾರದ ಅಧೀನ ಕಾರ್ಯದರ್ಶಿ ವಿ.ಟಿ.ರಾಜಶ್ರೀ  ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News