ಆನ್‍ಲೈನ್‍ನಲ್ಲಿ ಪೊಲೀಸ್ ವೆರಿಫಿಕೇಷನ್: ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

Update: 2020-07-24 18:06 GMT

ಬೆಂಗಳೂರು, ಜು.24: ಕೊರೋನ ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆ ಆಗುತ್ತಿರುವ ಹಿನ್ನೆಲೆ ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿದ್ದ ವೆರಿಫಿಕೇಷನ್ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.

ಶುಕ್ರವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ಸೇವಾ ಸಿಂಧು ವೆಬ್‍ಸೈಟ್ ಮೂಲಕ ವಿದೇಶ ಪ್ರಯಾಣಕ್ಕೆ ವೀಸಾ ವೆರಿಫಿಕೇಷನ್, ಕೆಲಸದ ನಿಮಿತ್ತ, ಕಂಪೆನಿಗಳ ಪೊಲೀಸ್ ವೆರಿಫಿಕೇಷನ್ ಸೇರಿ 8 ವಿವಿಧ ವೆರಿಫಿಕೇಷನ್‍ಗಳು ಆನ್‍ಲೈನ್‍ನಲ್ಲಿ ಅರ್ಜಿ ಲಭ್ಯವಾಗಲಿದೆ. ಹಾಗಾಗಿ, ಸಂಬಂಧಿಸಿದ ಇಲಾಖೆ ಅಥವಾ ಪೊಲೀಸ್ ಠಾಣೆಗಳಿಗೆ ಹೋಗುವ ಅಗತ್ಯತೆ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News