ತಾಯಿಗೆ ಕೊರೋನ ಸೋಂಕು ದೃಢ: ಆತ್ಮಹತ್ಯೆಗೆ ಶರಣಾದ ಪುತ್ರ

Update: 2020-07-25 14:17 GMT
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಜು.25: ಕೋವಿಡ್-19 ಪರೀಕ್ಷೆಯ ವರದಿಯಲ್ಲಿ ತಾಯಿಗೆ ಪಾಸಿಟಿವ್ ಬಂದ ಬೆನ್ನಲ್ಲೇ ಪುತ್ರನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಇಲ್ಲಿನ ಕುಲಕರ್ಣಿ ಹಕ್ಕಲದಲ್ಲಿ ನಿವಾಸಿ ರಾಕೇಶ್ ರಾಜೇಂದ್ರನ್ ದರ್ಮನ್ ಎಂಬಾತ ಮೃತ ಪುತ್ರ ಎಂದು ತಿಳಿದುಬಂದಿದೆ.

ರಾಕೇಶ್ ಮೊಬೈಲ್ ಫೋನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ತಾಯಿ ರೈಲ್ವೆ ಆಸ್ಪತ್ರೆಯಲ್ಲಿ ಸಫಾಯಿವಾಲಾ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಅವರಿಗೆ ಕೋವಿಡ್ 19 ದೃಢಪಟ್ಟಿತ್ತು. ಬಳಿಕ, ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇನ್ನು, ಮನೆ ಸೀಲ್‍ಡೌನ್ ಮಾಡಿ ರಾಕೇಶ್‍ಗೆ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ, ಶನಿವಾರ ರಾಕೇಶ್‍ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News