ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ

Update: 2020-07-27 10:41 GMT

ಶಿವಮೊಗ್ಗ, ಜು.27: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು, ಇಲಿಯಾಸ್ ನಗರದ ವಾಸಿ ಸುಹೇಲ್(25),ಮಿಳಘಟ್ಟ ವಾಸಿ ಶಹಬಾಜ್ ಷರೀಪ್ (19) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 44,000ರೂ ಮೌಲ್ಯದ  1ಕೆ.ಜಿ 50 ಗ್ರಾಂ ಗಾಂಜಾ ಮತ್ತು 25,000ರೂ ಮೌಲ್ಯದ ದ್ವಿಚಕ್ರ ವಾಹನ,ರೂ, 1450 ನಗದು ಹಣ ಮತ್ತು ಒಂದು ಮೊಬೈಲ್ ಫೋನ್‌ ವಶಕ್ಕೆ ಪಡೆದುಕೊಂಡು, ಆರೋಪಿಗಳ  ವಿರುದ್ಧ  ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News