ಕೋವಿಡ್ ಪೀಡಿತ ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಯುವತಿ

Update: 2020-07-28 05:56 GMT

  ಹೊಸದಿಲ್ಲಿ, ಜು.28: ಕೋವಿಡ್-19 ದೃಢಪಟ್ಟ ಕಾರಣ ನೊಯ್ಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ವೈದ್ಯರ ವಿರುದ್ಧ ಮಹಿಳಾ ರೋಗಿಯೊಬ್ಬರು ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ಇಬ್ಬರೂ ಕೋವಿಡ್-19ಗಾಗಿ ಚಿಕಿತ್ಸೆ ಪಡೆಯುತ್ತಿದ್ದು ಒಂದೇ ಐಸೋಲೇಶನ್ ವಾರ್ಡ್‌ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 20ರ ಹರೆಯದ ಯುವತಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಹೇಳಿದ್ದು, ಲೋಕಲ್ ಎಕ್ಸ್‌ಪ್ರೆಸ್ ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋವಿಡ್-19 ಪೀಡಿತ ವೈದ್ಯ ಹಾಗೂ ಮಹಿಳಾ ರೋಗಿಯನ್ನು ಒಂದೇ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಿರುವ ಆಸ್ಪತ್ರೆಯವರು ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಹಿಳೆ ಹಾಗೂ ವೈದ್ಯರಿಗೆ ಕಳೆದ ವಾರ ಕೊರೋನ ವೈರಸ್ ತಗಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಖಾಸಗಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿದ್ದರು. ಕೋವಿಡ್ ಪೀಡಿತ ವೈದ್ಯರು ಕೂಡ ಅದೇ ವಾರ್ಡ್‌ನಲ್ಲಿದ್ದರು. ಇಬ್ಬರೂ ಒಂದೇ ವಾರ್ಡ್‌ನ್ನು ಹಂಚಿಕೊಂಡಿದ್ದರು. ಯುವತಿಯು ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ಮಾಹಿತಿ ನೀಡಿದ ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ ಎಂದು ನೊಯ್ಡೆದ ಹೆಚ್ಚುವರಿ ಪೊಲೀಸ್ ಉಪಾಯುಕ್ತ ರಣವಿಜಯ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News