ಕೆಸಿಎಫ್ ಯುಎಇ ವತಿಯಿಂದ ಎಮ್.ಎಸ್ ಎಕ್ಸೆಲ್ ಆನ್ಲೈನ್ ತರಬೇತಿ ಶಿಬಿರಕ್ಕೆ ಚಾಲನೆ

Update: 2020-07-28 18:56 GMT

ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ವತಿಯಿಂದ ಎಮ್.ಎಸ್ ಎಕ್ಸೆಲ್ (MS EXCEL) ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಝೂಮ್ ಅಪ್ಲಿಕೇಶನ್ ಮೂಲಕ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲರವರ ದುಆದೊಂದಿಗೆ ನಡೆಯಿತು. 

ವಿವಿಧ ಸಂಸ್ಥೆಗಳಲ್ಲಿ ದುಡಿಯುತ್ತಿರುವವರಿಗೆ ಹಾಗೂ ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ಉಪಯುಕ್ತವಾಗುವ ರೀತಿಯಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ತಿಳಿಸಿದರು. MS EXCEL ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಂತಹ ಒಂದು ಉತ್ತಮ ಸಾಫ್ಟ್ ವೇರ್ ಆಗಿ ಗುರುತಿಸಿಕೊಂಡಿದ್ದು ಸಂಸ್ಥೆಯ ಎಲ್ಲಾ ಆಗುಹೋಗುಗಳನ್ನು ವ್ಯಾಪಾರ ವಹಿವಾಟುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ.ಶೈಖ್ ಬಾವ ರವರು ಕೆಸಿಎಫ್ ಸಕಾಲಿಕ ಆವಶ್ಯಕತೆಗಳಿಗೆ ಸ್ಪಂದಿಸಿ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು. ಐಟಿ ಕುರಿತು ಮಾಹಿತಿ ನೀಡುವ MS EXCEL ತರಬೇತಿ ಶಿಬಿರ ಶ್ಲಾಘನೀಯ ಹೆಜ್ಜೆಯೆಂದು ಬಣ್ಣಿಸಿದರು. 

ಯುಎಇ ಕೆಸಿಎಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಮೂಸಾ ಹಾಜಿ ಬಸರ ಅತಿಥಿಗಳನ್ನು ಸ್ವಾಗತಿಸಿದರು. ವೆಲ್ಫೇರ್ ಡಿವಿಶನ್ ಅಧ್ಯಕ್ಷ ಝೈನುದ್ದಿನ್ ಹಾಜಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. MS EXCEL ಬಗ್ಗೆ ನುರಿತ ಅಧ್ಯಾಪಕರಾದ ಮಾಸ್ಟರ್ ರಿಯಾಝ್ ಸರ್ ರವರಿಂದ ತರಗತಿಗೆ ಚಾಲನೆ ನೀಡಲಾಯಿತು. ಇಮ್ರಾನ್ ಕೆಸಿ ರೋಡ್ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News