ಕೊಡಗು: ಮತ್ತೆ ಏಳು ಮಂದಿಯಲ್ಲಿ ಕೋವಿಡ್ ಸೋಂಕು ದೃಢ

Update: 2020-07-29 04:55 GMT

ಮಡಿಕೇರಿ, ಜು.29: ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಬೆಳಗ್ಗೆ 8:30ರ ವೇಳೆಗೆ ಇಬ್ಬರು ಬಾಲಕರ ಸಹಿತ ಹೊಸದಾಗಿ ಏಳು ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿವೆ.

ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ 74 ವರ್ಷದ ವೃದ್ಧ, ಮಡಿಕೇರಿ ಐಟಿಐ ಹಿಂಭಾಗದ 38 ವರ್ಷದ ಪುರುಷ, ಮಡಿಕೇರಿ ಕರ್ಣಂಗೇರಿ ಗ್ರಾಮದ 32 ವರ್ಷದ ಯುವಕ, ವೀರಾಜಪೇಟೆಯ ಸಿದ್ಧಾಪುರದ 45 ಮತ್ತು 38 ವರ್ಷದ ಮಹಿಳೆ, 15 ಮತ್ತು 9 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 363 ಆಗಿದ್ದು, ಈ ಪೈಕಿ 270 ಜನ ಗುಣಮುಖರಾಗಿದ್ದಾರೆ. 87 ಸಕ್ರಿಯ ಪ್ರಕರಣಗಳಿದ್ದು, 6 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 77 ಆಗಿದೆ ಎಂದು ಜಿಲ್ಲಾಧಿಲಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News