ಮೈಸೂರಿನಲ್ಲಿ ಇಂದು 200 ಮಂದಿಗೆ ಕೊರೋನ ಸೋಂಕು: ಐದು ಮಂದಿ ಸಾವು

Update: 2020-07-29 18:32 GMT

ಮೈಸೂರು,ಜು.29; ಮೈಸೂರಿನಲ್ಲಿ ಬುಧವಾರ 200 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ.

ಕೊರೋನ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಕೊರೋನ ಸೋಂಕಿತರ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಇಂದು 200 ಮಂದಿಗೆ ಕೊರೋನ ಸೊಂಕು ದೃಡಪಟ್ಟಿದ್ದು, ಈವರೆಗೆ 3583 ಮಂದಿಗೆ ಕೊರೋನ ಸೋಂಕು ತಗಲಿದಂತಾಗಿದೆ.

ಇಂದು 134 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಸದ್ಯ 2310 ಸಕ್ರಿಯ ಕೊರೋನ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಲೆ ಇದ್ದು, ಇಂದು ಐದು ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 128 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News