ಮರಾಠಿ ನಟ ಅಶುತೋಶ್ ಆತ್ಮಹತ್ಯೆ

Update: 2020-07-30 05:17 GMT

ಮುಂಬೈ, ಜು.30: ಮರಾಠಿ ನಟ ಅಶುತೋಷ್ ಭಕ್ರೆ ಮರಾಠವಾಡ ವಲಯದ ನಾಂದೇಡ್ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದರು.

ಬುಧವಾರ ಮಧ್ಯಾಹ್ನ ಈ ಘಟನೆಯು ಬೆಳಕಿಗ ಬಂದಿದ್ದು, ನಾಂದೇಡ್‌ನ ಗಣೇಶ್ ನಗರದಲ್ಲಿರುವ ಫ್ಲಾಟ್‌ನಲ್ಲಿ ಅಶುತೋಷ್(32 ವರ್ಷ)ನೇಣುಬಿಗಿದ ಸ್ಥಿತಿಯಲ್ಲಿರುವುದನ್ನು ಅವರ ಹೆತ್ತವರು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಶುತೋಷ್ ಅವರ ಪತ್ನಿ ಮಯೂರಿ ದೇಶ್‌ಮುಖ್ ಕೂಡ ಮರಾಠಿಯಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ಮರಾಠಿ ಧಾರಾವಾಹಿ ಖುಲ್ಟಾ ಕಾಲಿ ಖುಲೆನಾದ ಮೂಲಕ ಖ್ಯಾತಿ ಪಡೆದಿದ್ದರು. ಮರಾಠಿ ಚಿತ್ರಗಳಾದ ಭಕರ್ ಹಾಗೂ ಇಚಾರ್ ಥಾರ್ಲಾ ಪಕ್ಕಾ ಎಂಬ ಚಿತ್ರಗಳಲ್ಲಿ ನಟಿಸಿದ್ದರು.

 ನಟನ ಸಂಶಯಾಸ್ಪದ ಆತ್ಮಹತ್ಯೆಗೆ ಕಾರಣ ಏನೆಂದು ಇನ್ನಷ್ಟು ಗೊತ್ತಾಗಬೇಕಾಗಿದೆ. ಭಕ್ರೆ ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ವ್ಯಕ್ತಿ ಏಕೆ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ ಎಂಬ ಕುರಿತ ವಿಶ್ಲೇಷಣೆಯುಳ್ಳ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News