ವಿದ್ಯುತ್ ಸ್ಪರ್ಶದಿಂದ ಆನೆ ಸಾವು

Update: 2020-07-31 07:17 GMT

ಕಡೂರು, ಜು.೩೧: ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಆನೆ ಆಹಾರ ಅರಸಿ ರಾತ್ರಿ ವೇಳೆ ಹುಲಿಯಪ್ಪ ಎಂಬವರ ಜಮೀನಿನಲ್ಲಿ ಹಾಕಿದ್ದ ಜೋಳದ ಹೊಲಕ್ಕೆ ನುಗಿದ್ದು  ಈ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ ಎನ್ನಲಾಗಿದೆ.

ಆನೆ ಸಾವನ್ನಪ್ಪಿದ್ದು ತಿಳಿದು ಜಮೀನಿನ ಮಾಲೀಕ ಹುಲಿಯಪ್ಪ ತಲೆಮರೆಸಿಕೊಂಡಿದ್ದಾರೆ.

ಸುಮಾರು 3 ವರ್ಷದ ಪ್ರಾಯದ ಆನೆ ಮೃತಪಟ್ಟಿದ್ದು, ಕಡೂರು ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಳೆದ ವರ್ಷವೂ ವಿದ್ಯುತ್ ಸ್ಪರ್ಶದಿಂದ ಇದೇ ವ್ಯಾಪ್ತಿಯಲ್ಲಿ ಗಂಡಾನೆ ಸಾವನ್ನಪ್ಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News