ಎಫ್‌ಎ ಕಪ್ ಟ್ರೋಫಿ ಜಯಿಸಿದ ಆರ್ಸೆನಲ್

Update: 2020-08-03 04:04 GMT

ವೆಂಬ್ಲಿ: ಚೆಲ್ಸಿ ತಂಡವನ್ನು 2-1 ಅಂತರದಲ್ಲಿ ಮಣಿಸಿದ ಆರ್ಸೆನಲ್ ಎಫ್‌ಎ ಕಪ್ ಟ್ರೋಫಿಯನ್ನು ಬಾಚಿಕೊಂಡಿದೆ.

ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಫ್‌ಎ ಕಪ್ ಫೈನಲ್‌ನಲ್ಲಿ ಆರ್ಸೆನಲ್ ನಾಯಕ ಪಿಯರೆ-ಎಮೆರಿಕ್ ಹುಬಮೇಯಾಂಗ್ ಎರಡು ಗೋಲು ದಾಖಲಿಸಿ ಚೆಲ್ಸಿ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಗಳಿಸಲು ನೆರವಾದರು. ಮೈಕೆಲ್ ಆರ್ಟೆಟಾ ಆರ್ಸೆನಲ್ ಮ್ಯಾನೇಜರ್ ಆದ ಬಳಿಕ ಅವರ ನೇತೃತ್ವದಲ್ಲಿ ತಂಡ ಮೊದಲ ಟ್ರೋಫಿಯನ್ನು ಗಳಿಸಿತು. ಸ್ಪರ್ಧೆಯು 1-1ರಲ್ಲಿ ಲಾಕ್ ಆಗಿದ್ದಾಗ ಗನ್ನರ್ಸ್ ಸ್ಟ್ರೈಕರ್ ಹುಬಮೇಯಾಂಗ್ 67 ನೇ ನಿಮಿಷದಲ್ಲಿ ತನ್ನ ಎಡಗಾಲಿನಿಂದ ಚೆಂಡನ್ನು ಗುರಿಯತ್ತ ಕಳುಹಿಸಿದರು. ಪ್ರೀಮಿಯರ್ ಲೀಗ್‌ನಲ್ಲಿ ಎಂಟನೇ ಸ್ಥಾನ ಗಳಿಸಿದ ನಂತರ ಆರ್ಸೆನಲ್ ಎಫ್‌ಎ ಕಪ್ ಇದೀಗ ಉತ್ತಮ ಪ್ರದರ್ಶನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 ಐದನೇ ನಿಮಿಷದಲ್ಲಿ ಕ್ರಿಸ್ಟಿಯನ್ ಪುಲಿಸಿಕ್ ಅವರು ಗೋಲುಕೀಪರ್ ಎಮಿಲಿಯಾನೊ ಮಾರ್ಟಿನೆಝ್ ಅವರ ಕಣ್ಣು ತಪ್ಪಿಸಿ ಬಹಳ ಹತ್ತಿರದಿಂದಲೇ ಚೆಂಡನ್ನು ಗೋಲು ಪೆಟ್ಟಿಗೆಗೆ ಕಳುಹಿಸಿ ಚೆಲ್ಸಿ ತಂಡಕ್ಕೆ 1-0 ಮುನ್ನಡೆ ಸಾಧಿಸಲು ನೆರವಾದರು. 28ನೇ ನಿಮಿಷದಲ್ಲಿ ಆರ್ಸೆನಲ್ ನಾಯಕ ಪಿಯರೆ-ಎಮೆರಿಕ್ ಹುಬಮೇಯಾಂಗ್ ಮೊದಲ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು. 67ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿದ ಎಮೆರಿಕ್ ತಂಡದ ಗೆಲುವನ್ನು ದೃಢಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News